ಕಲುಷಿತಗೊಂಡಿದ್ದಾಳೆ ಜೀವನದಿ ಕಾವೇರಿ ...!

ಜೀವನದಿ ಕಾವೇರಿ ಹರಿಯುವ ಮಾರ್ಗದ ಕೆಲವು ಭಾಗದ ನೀರು ಕುಡಿಯಲು ಅಷ್ಟೇ ಅಲ್ಲ ಸ್ನಾನಕ್ಕೂ ಯೋಗ್ಯವಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಜೀವನದಿ ಕಾವೇರಿ ಹರಿಯುವ ಮಾರ್ಗದ ಕೆಲವು ಭಾಗದ ನೀರು ಕುಡಿಯಲು ಅಷ್ಟೇ ಅಲ್ಲ ಸ್ನಾನಕ್ಕೂ ಯೋಗ್ಯವಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಕಾವೇರಿ ನದಿಯ ನೀರನ್ನು 25 ತಾಣಗಳಲ್ಲಿ ಪರೀಕ್ಷೆಗೊಳಪಡಿಸಿದಾಗ ಈ ಅಂಶ ತಿಳಿದು ಬಂದಿದ್ದು, ಕಾವೇರಿ ನದಿಯು ಶೇ. 75ರಷ್ಟು ಕಲುಷಿತಗೊಂಡಿದೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಪ್ರಯೋಗಾಲಯವು ಅಂತಾರಾಷ್ಟ್ರೀಯ ಗುಣಮಟ್ಟದ ಮಾಪನ ಉಪಕರಣಗಳೊಂದಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಿದ್ದು ನಂಜನಗೂಡು, ಮಂಡ್ಯ ಭಾಗದಲ್ಲೇ ನೀರು ಹೆಚ್ಚಾಗಿ ಕಲುಷಿತಗೊಳ್ಳುತ್ತಿರುವುದು ದೃಢಪಟ್ಟಿದೆ ಕೈಗಾರಿಕೆ ತ್ಯಾಜ್ಯ, ಘನ ತ್ಯಾಜ್ಯ ಅಪಾಯದ ಪ್ರಮಾಣ ಮೀರಿ ನದಿ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ಕಾವೇರಿ ನೀರು ಮಲೀನಗೊಂಡಿದೆ.

ಹೀಗಾಗಿ ಮಡಿಕೇರಿ, ಮಂಡ್ಯ ಹಾಗೂ ರಾಮನಗರ ನಗರಸಭೆ ಮತ್ತು ನಂಜನಗೂಡು ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಗೆ ನೋಟಿಸ್‌ ಜಾರಿ ಮಾಡಿ ಘನತ್ಯಾಜ್ಯ ಹಾಗೂ ಕೈಗಾರಿಕಾ ತ್ಯಾಜ್ಯ ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.

ರಾಜ್ಯದ ಜೀವನದಿ ಕಾವೇರಿಗೆ ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಹಾಗೂ ಇತರೆ ಅಪಾಯಕಾರಿ ವಸ್ತುಗಳನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಹಾಗೂ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿದ್ದರೆ ಪರಿಸರ ಸಂರಕ್ಷಣೆ ಕಾಯ್ದೆಯಡಿ ಬೃಹತ್‌ ಮೊತ್ತದ ದಂಡ ವಿಧಿಸುವುದು ಸೇರಿದಂತೆ ಇತರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com