ಪಟೇಲ್ ರೀತಿಯ ನಾಯಕ ಭಾರತಕ್ಕೆ ಇಂದು ಅವಶ್ಯ: ವೆಂಕಯ್ಯ ನಾಯ್ಡು

``ದೇಶದ ಅಭಿವೃದ್ಧಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವು ಪ್ರಮುಖರು ಹೋರಾಡಿದ್ದರೂ, ನೆಹರೂ ಕುಟುಂಬವನ್ನು ಮಾತ್ರ ವೈಭವೀಕರಿಸಲಾಗುತ್ತಿದೆ. ದೇಶಕ್ಕೆ ಹಲವು ವರ್ಷಗಳಿಂದ ನಿರ್ಣಾಯಕ ನಾಯಕರಿಲ್ಲ. ಪಟೇಲ್ ಅವರಂಥ ನಾಯಕತ್ವ ಇಂದು ಅಗತ್ಯವಿದೆ...
ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ)
ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ``ದೇಶದ ಅಭಿವೃದ್ಧಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವು ಪ್ರಮುಖರು ಹೋರಾಡಿದ್ದರೂ, ನೆಹರೂ ಕುಟುಂಬವನ್ನು ಮಾತ್ರ ವೈಭವೀಕರಿಸಲಾಗುತ್ತಿದೆ. ದೇಶಕ್ಕೆ ಹಲವು ವರ್ಷಗಳಿಂದ ನಿರ್ಣಾಯಕ ನಾಯಕರಿಲ್ಲ. ಪಟೇಲ್ ಅವರಂಥ ನಾಯಕತ್ವ ಇಂದು ಅಗತ್ಯವಿದೆ,'' ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಬೇಸರ ವ್ಯಕ್ತಪಡಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ 140 ನೇ ಜಯಂತಿ ಅಂಗವಾಗಿ ಶನಿವಾರ ನಗರದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ಏಕತಾ ದಿವಸ್'ನಲ್ಲಿ ಮಾತನಾಡಿದ ಅವರು,``ದೇಶದ ಏಕತೆಗೆ ಹಾಗೂ ಸ್ವಾತಂತ್ರ್ಯಕ್ಕೆ ಅನೇಕರು ಹೋರಾಡಿದ್ದಾರೆ. ರಾಜ್ಯದಲ್ಲಿ ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಕೇವಲ
ನೆಹರೂ ಹಾಗೂ ಇಂದಿರಾಗಾಂಧಿಯವರನ್ನು ಸ್ಮರಿಸಲಾಗುತ್ತ ದೆ. ಭಗತ್‍ಸಿಂಗ್, ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತೀಯ
ಇತಿಹಾಸದಲ್ಲಿ ಅನ್ಯಾಯವಾಗಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಮೊದಲ ಪ್ರಧಾನಿಯಾಗಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತಿತ್ತು ಎಂದು ಇಂದಿಗೂ ಹೇಳಲಾಗುತ್ತದೆ. ಅಂದು ಪಟೇಲ್ ಅವರು ಪ್ರಾಂತ್ಯಗಳನ್ನು ಒಗ್ಗೂಡಿಸಿದ್ದರಿಂದ ಇಂದು ಒಂದು ದೇಶವನ್ನು ನೋಡಲು ಸಾಧ್ಯವಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶಕ್ಕೆ ನಿರ್ಣಾಯಕ ನಾಯಕನಿಲ್ಲದೆ ಕೆಟ್ಟ ಪರಿಣಾಮವನ್ನು ದೇಶ ಎದುರಿಸಿದೆ. ಈಗ ದೇಶಕ್ಕೆ ಪಟೇಲ್ ಅವರಂತಹ ನಾಯಕತ್ವ ಅಗತ್ಯವಿದೆ,'' ಎಂದರು. ಸಂಸದರಾದ ಪ್ರಹ್ಲಾದ ಜೋಶಿ, ಪಿ.ಸಿ.ಮೋಹನ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com