

ವಿಜಯಪುರ: `ಮಳೆ ಆರಂಭವಾಗಿರುವುದರಿಂದ ಮುಂಗಾರು ವೈಫಲ್ಯದ ಪರಿಹಾರದೊರೆಯದೆಂದು ರೈತರು ಆತಂಕಪಡುವ ಅಗತ್ಯವಿಲ್ಲ' ಎಂದು ಕೇಂದ್ರ ಕೃಷಿ ಮಂತ್ರಾಲ ಯದ ಜಂಟಿ ಕಾರ್ಯದರ್ಶಿ ಹಾಗೂ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಆರ್.ಬಿ. ಸಿನ್ಹಾ ತಿಳಿಸಿದ್ದಾರೆ. ಗುರುವಾರ ಬರ ಅಧ್ಯಯನ ತಂಡದ ಸದಸ್ಯರುಜಿಲ್ಲೆಯ ವಿವಿಧೆಡೆ ಭೇಟಿ ನೀಡಿದ್ದರು. ಮೈಸೂರು, ತುಮಕೂರು, ಬಾಗಲಕೋಟೆ ಜಿಲ್ಲೆಗಳಿಗೂ ಕೇಂದ್ರ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದವು.