ಜಿಲ್ಲಾ ಸುದ್ದಿ

ಜಿಲ್ಲಾಡಳಿತದ ಕಾರು ಸರಂಜಾಮು ಜಪ್ತಿ

ಜಿಲ್ಲಾಡಳಿತದ ಕಾರು ಸರಂಜಾಮು ಜಪ್ತಿ
ಹೈಕೋರ್ಟ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಚಿಕ್ಕಲ್ಲಸಂದ್ರ ಕೆರೆ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾಡಳಿತ ಕಚೇರಿಯ ಕೆಲವು ಪರಿಕರಗಳನ್ನು ಮಂಗಳವಾರ ಜಪ್ತಿ ಮಾಡಲಾಗಿದೆ.

ವೆಂಕಟಸ್ವಾಮಿ ಎಂಬುವರ ಮನೆಯನ್ನು ತೆರವುಗೊಳಿಸಿದ ಪ್ರಕರಣದಲ್ಲಿ ಹೈಕೋರ್ಟ್ ಜಪ್ತಿಗೆ ಆದೇಶ ನೀಡಿದ್ದು, ಜಿಲ್ಲಾಡಳಿತಕ್ಕೆ ಸೇರಿದ 2 ಇನೋವಾ ಕಾರುಗಳು, 40 ಕಂಪ್ಯೂಟರ್ , 2 ಜೆರಾಕ್ಸ್ ಯಂತ್ರ ವಶಪಡಿಸಿ ಕೊಳ್ಳುವಂತೆ ತಿಳಿಸಲಾಗಿತ್ತು. ಇದರಲ್ಲಿ ಸದ್ಯಕ್ಕೆ ಒಂದು ಕಾರು ಹಾಗೂ ಒಂದು ಜೆರಾಕ್ಸ್ ಯಂತ್ರ ಮಾತ್ರ ವಶಕ್ಕೆ ಪಡೆಯಲಾಗಿದೆ. ಕಳೆದ ಬಾರಿ ಜಿಲ್ಲಾಡಳಿತ ದಕ್ಷಿಣ ತಾಲೂಕು ತಹಸೀಲ್ದಾರ್ ಡಾ. ಬಿ.ಆರ್. ದಯಾನಂದ್ ನೇತೃತ್ವದಲ್ಲಿ ಚಿಕ್ಕಲ್ಲಸಂದ್ರದ ಸರ್ವೆ ನಂ.3ರಲ್ಲಿದ್ದ 12 ಎಕರೆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು.

ಇಲ್ಲಿನ ನಿವಾಸಿ ವೆಂಕಟಸ್ವಾಮಿ ಎಂಬುವರಿಗೆ ಸೇರಿದ 12 ಕಟ್ಟಡಗಳಲ್ಲಿ 5 ವಾಣಿಜ್ಯ ಕಟ್ಟಡ ಹಾಗೂ 3 ಮನೆಗಳನ್ನು ಒಡೆದು ತೆರವು ಮಾಡಲಾಗಿತ್ತು. ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ವೆಂಕಟಸ್ವಾಮಿ, ಈ ಜಾಗ ತಮಗೆ ಸೇರಿದ್ದು ಎಂದು ಕೋರ್ಟ್‍ಗೆ ಮೊರೆಹೋಗಿದ್ದರು. ಹಲವು ತಿಂಗಳಿಂದ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಾಗದಿರುವುದರಿಂದ ಕಚೇರಿ ಜಪ್ತಿ ಮಾಡಲು ಆದೇಶ ನೀಡಲಾಗಿದೆ.

ಮುನ್ಸೂಚನೆ ನೀಡದೇ ಕಾರ್ಯಾಚರಣೆ: `ಈ ಹಿಂದೆ ಭೂ ವಿವಾದದ ಹಲವು ಮೊಕದ್ದಮೆಗಳಲ್ಲಿ ಈ ಜಾಗ ವೆಂಕಟಸ್ವಾಮಿ ಅವರಿಗೇ ಸೇರಿದೆ ಎಂದು ನ್ಯಾಯಾಲಯದ ಆದೇಶ ಹೊರಬಿದ್ದಿತ್ತು.
ಈ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದ ಜಿಲ್ಲಾಡಳಿತ ಯಾವುದೇ ಮುನ್ಸೂಚನೆಯಿಲ್ಲದೆ ತೆರವು ಕಾರ್ಯಾಚರಣೆ ನಡೆಸಿತ್ತು. ಇದರಿಂದ ವೆಂಕಟಸ್ವಾಮಿ 5 ಅಂಗಡಿ, 3 ಮನೆ ಕಳೆದು-
ಕೊಂಡಿದ್ದರು. ಈಗ ಜಪ್ತಿ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ. ಆದರೆ ಕಚೇರಿಯ ಕಂಪ್ಯೂಟರ್ ಗಳು ಸಾರ್ವಜನಿಕ ಸ್ವತ್ತಾಗಿರುವುದರಿಂದ ವಶಕ್ಕೆ ಪಡೆಯುವುದು ಬೇಡ ಎಂದು ತಿಳಿಸಿದ್ದೇವೆ. ಜಿಲ್ಲಾಡಳಿತದ ಅಧಿಕಾರಿಗಳು ವಿಚಾರಣೆಗೆ ಹಾಜರಾಗದಿರುವುದರಿಂದ ಹೀಗಾಗಿದೆಎಂದು ವೆಂಕಟಸ್ವಾಮಿ ಪರ ವಕೀಲ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.