

ಬೆಂಗಳೂರು: ಅಧಿಕೃತ ಜನತಾ ದರ್ಶನವನ್ನು 11 ತಿಂಗಳ ಬಳಿಕ ನಡೆಸುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ನಾನು ದಿನಾಲು ಜನತಾ ದರ್ಶನ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾನಾ ಕಾರಣಗಳಿಂದ ಜನತಾ ದರ್ಶನವನ್ನು ಈ ರೀತಿ ನಡೆಸಲು ಸಾಧ್ಯವಾಗಿಲ್ಲ. ಹಾಗಂಥ ನಾನು ಜನರಿಂದ ದೂರ ಉಳಿದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಚಿವರು, ಶಾಸಕರ ನೇತೃತ್ವದಲ್ಲಿ ಜನತಾ ದರ್ಶನ ನಡೆಸುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.80ರಷ್ಟು ಇತ್ಯರ್ಥವಾಗಿದೆ ಎಂದರು.