ಸೆಲ್ಫೀ ಹುಚ್ಚಿಗೆ ಜೀವ ತೆತ್ತ

ಜಲಪಾತಗಳ ತುದಿಯಲ್ಲಿ ನಿಂತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚು ಯುವಕನೊಬ್ಬನ ಪ್ರಾಣವನ್ನು ಬಲಿ ತೆಗೆದು ಕೊಂಡಿದೆ. ಯುವಕ ಕಾಲುಜೀರಿ ಬಿದ್ದು ಸಾವಿಗೀಡಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮಂಗಳೂರು: ಜಲಪಾತಗಳ ತುದಿಯಲ್ಲಿ ನಿಂತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚು ಯುವ ಕನೊಬ್ಬನ ಪ್ರಾಣವನ್ನು ಬಲಿ ತೆಗೆದು ಕೊಂಡಿದೆ. ಯುವಕ ಕಾಲುಜೀರಿ ಬಿದ್ದು ಸಾವಿಗೀಡಾದ ಘಟನೆ ಸುಳ್ಯ ತಾಲೂಕು ಕಲ್ಯಾಳದಲ್ಲಿ ನಡೆದಿದೆ. ಸುಳ್ಯ ಬೀರಮಂಗಲದ ನಿವಾಸಿ ಹರ್ಷಿತ್ ನಾಯ್ಕ್ (20) ಯಾನೆ ಅಣ್ಣು ಮೃತರು. ಸ್ನೇಹಿತರ ಜತೆ ಅವರು ಮಂಗಳವಾರ ಸಂಜೆ ಕಲ್ಯಾಳ ಜಲಪಾತಕ್ಕೆ ತೆರಳಿದ್ದರು. ಫಾಲ್ಸ್ ತುದಿಯಲ್ಲಿ ನಿಂತು ಸೆಲ್ಫೀ ತೆಗೆಯುತ್ತಿದ್ದಾಗ ಹರ್ಷಿತ್ ನಾಯ್ಕ್  ಕಾಲು ಜಾರಿ ಬಿದ್ದರು. ರಾತ್ರಿಯೇ ಸುಳ್ಯ ಆಸ್ಪತ್ರೆಗೆ ದಾಖಲಿಸಲಾ ಯಿತು. ಹೆಚ್ಚಿನ ಚಿಕಿತ್ಸೆಗೆ ಬುಧವಾರ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟರು. ಹರ್ಷಿತ್ ಬಾಲ್ಯದಿಂದಲೇ ಬೀರಮಂಗಲದ ತನ್ನ ಮಾವ ಬಾಲಕೃಷ್ಣ ನಾಯ್ಕ್ ಮನೆಯಲ್ಲಿ ನೆಲೆಸಿದ್ದರು. ಅವರು ಮತ್ತು ಜತೆಗಿದ್ದ ಸ್ನೇಹಿತರು ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರ ರಜೆ ಇದ್ದುದರಿಂದ ಫಾಲ್ಸ್  ತೆರಳಿದ್ದರು.


ಮೂರನೇ ಘಟನೆ: ಉಡುಪಿ ಕೊಡಗು ಜಿಲ್ಲೆಗಳು ಜಲಪಾತಗಳ ತವರಾಗಿದ್ದು, ಮಳೆಗಾಲದಲ್ಲಿ ಪ್ರವಾಸಿಗರು ಜಲಪಾತಗಳ ವೀಕ್ಷಣೆಗೆಂದೇ ಬರುತ್ತಾರೆ. ಇವರಲ್ಲಿ ಬೆಂಗಳೂರು, ಮೈಸೂರು ಭಾಗಗಳಿಂದ ಬರುವ ಟೆಕ್ಕಿಗಳು, ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ. ಬುಧವಾರ ನಡೆದಿರುವುದು ಮೂರನೇ ಘಟನೆ. ಸೆಲ್ಫೀ ಸೆರೆ ಹಿಡಿಯಲು ಹೋದ ನವವಿವಾಹಿತ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಕಳೆದ ತಿಂಗಳಷ್ಟೇ ಕೊಡಗಿನ ನಾಪೊಕ್ಲು ಸಮೀಪದ ಚೇಲಾವರ ಜಲಪಾತ ಬಳಿ ನಡೆದಿತ್ತು. ಕಲ್ಯಾಳ ಫಾಲ್ಸ್ ನಲ್ಲಿ ಇತ್ತೀಚೆಗಷ್ಟೇ ಜೀಪು ಚಾಲಕರೊಬ್ಬರು ಬಿದ್ದು ಕೊನೆಯುಸಿರೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com