ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಿದರೆ ಯಡಿಯೂರಪ್ಪಗೆ ಸಾಷ್ಟಾಂಗ ನಮಸ್ಕಾರ: ಬಸವರಾಜ ಹೊರಟ್ಟಿ

ಕಳಸಾ ಬಂಡೂರಿ ಯೋಜನೆಯ ಸಮಸ್ಯೆಯನ್ನು 24 ಗಂಟೆಯೊಳಗೆ ಬಗೆಹರಿಸಿದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Updated on: 

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಯ ಸಮಸ್ಯೆಯನ್ನು 24 ಗಂಟೆಯೊಳಗೆ ಬಗೆಹರಿಸಿದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕಳಸಾ ಬಂಡೂರಿ ನಾಲಾ ಯೋಜನೆಗೆ ಯಡಿಯೂರಪ್ಪ ಪಕ್ಷಾತೀತವಾಗಿ ನೇತೃತ್ವವ ವಹಿಸುವುದಾದರೆ ಬೆಂಬಲ ನೀಡುತ್ತೇವೆ, ಸಮಸ್ಯೆ ಬಗೆಹರಿಸಿದರೆ ಹೂವಿನ ಮಾಲೆ ಹಾಕಿ ಯಡೂರಪ್ಪ ಅವರಿಗೆ ನಮಸ್ಕಾರ ಮಾಡುತ್ತೇನೆ, ರಾಜಕಾರಣ ಬಿಟ್ಟು ಪಕ್ಷಾತೀತವಾಗಿ ಹೋರಾಟದ ನೇತೃತ್ವ ವಹಿಸಬೇಕು ಎಂದು ಹೊರಟ್ಟಿ ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣ ಬಿಟ್ಟು ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ. ಸೆ.26 ರಂದು ನಡೆದ ಬಂದ್ ವೇಳೆ, ಪ್ರಹ್ಲಾದ್ ಜೋಷಿ ನಿವಾಸಕ್ಕೆ ಮುತ್ತಿಗೆ ಹಾಕಲು ಕುಮ್ಮಕ್ಕು ನೀಡಿರುವ ಆರೋಪವನ್ನು ಬಸವರಾಜ ಹೊರಟ್ಟಿ ತಳ್ಳಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com