ಹಿರಿಯ ನಾಗರಿಕರಿಗೆ ಪ್ರಶಸ್ತಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 6 ಹಿರಿಯ ನಾಗರಿಕರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 6 ಹಿರಿಯ
ನಾಗರಿಕರು ಹಾಗೂ ಒಂದು ಹಿರಿಯ ನಾಗರಿಕ ಸಂಸ್ಥೆಗೆ ಪ್ರಶಸ್ತಿ ಘೋಷಿಸಿದೆ.

ಪ್ರಶಸ್ತಿ 1 ಲಕ್ಷ ನಗದು ಬಹುಮಾನ,ನೆನಪಿನ ಕಾಣಿಕೆ ಒಳಗೊಂಡಿದೆ. ಅಕ್ಟೋಬರ್ 1ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆ ವಹಿಸುವರು.ಇದೇ ವೇಳೆ ರಾಜ್ಯದ 30 ಜಿಲ್ಲೆಗಳಲ್ಲಿ ಹಿರಿಯ ನಾಗಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಪೈಕಿ ರಾಜ್ಯಮಟ್ಟದಲ್ಲಿ ಗೆದ್ದವರಿಗೂ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.

ಯಾರಿಗೆ ಪ್ರಶಸ್ತಿ: ದಾವಣಗೆರೆ ಜಿಲ್ಲೆಯ ಎಚ್. ಷಡಕ್ಷರಪ್ಪ- ಕಲಾಕ್ಷೇತ್ರ,ಬಾಗಲಕೋಟೆಯ ಗುರಮ್ಮ ಹಂಪಮ್ಮ- ಸಮಾಜ ಸೇವೆ, ಉತ್ತರ ಕನ್ನಡ ಜಿಲ್ಲೆಯ ಅಮೀರ ಹುಸೇನ ದೊಡ್ಡಮನಿ- ಶಿಕ್ಷಣ ಕ್ಷೇತ್ರ, ಬೆಂಗಳೂರು ಯಲಹಂಕದ ಎಸ್.ಸರೋಜ- ಕ್ರೀಡಾ ಕ್ಷೇತ್ರ, ಮೈಸೂರಿನ ಪ್ರೊ.ಎಚ್.ಜೆ. ಲಕ್ಕಪ್ಪಗೌಡ- ಸಾಹಿತ್ಯ,ಬೆಂಗಳೂರು ಬನ್ನೇರುಘಟ್ಟದ
ಶಿವಕುಮಾರ್- ಕಾನೂನು. ಬಳ್ಳಾರಿ ಜಿಲ್ಲೆಯ ಅನ್ನವರ್ಜಲ ಸುಬ್ರಹ್ಮಣ್ಯಂ ಮೆಮೋರಿಯಲ್ ಟ್ರಸ್ಟ್-ಸಂಸ್ಥೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com