ಹೆಚ್ಚಿನ ಪರಿಹಾರ; ಚಾಲಕನ ಹಕ್ಕೊತ್ತಾಯಕ್ಕೆ ಹೈ ನಿರ್ಬಂಧ

ಬೆಂಗಳೂರು: ಪರಿಹಾರ ನೀಡುವ ವಿಚಾರ ಸಂಬಂಧ ಕೊಕೊ ಕೋಲಾ ಕಂಪನಿಯ ವಾಹನ ಚಾಲಕನ ಹಕ್ಕೊತ್ತಾಯಗಳಿಗೆ ಹೈಕೊರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ಈ ಸಂಬಂಧ ಕೊಕೊ ಕೋಲಾ ಬೇವರಿಜ್ ಪ್ರೈವೇಟ್ ಕಂಪೆನಿಯ ಬಿಡದಿ ಘಟಕದ ವಾಹನ ಚಾಲಕ ಬಿ.ಎನ್. ಶಿವೇಗೌಡ ಹಾಗೂ ಬಿಡದಿ ಪೊಲೀಸ್ ಠಾಣೆಯ ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಲಾಗಿದೆ. ಬಿ.ಎನ್. ಶಿವೇಗೌಡ ವಾಹನದಿಂದ ಸರಕುಗಳನ್ನು ಕೆಳಗಿಳಿಸುವಾಗ ಸಂಭವಿಸಿದ ಅವಘಡದಲ್ಲಿ ಭುಜಕ್ಕೆ ಪೆಟ್ಟಾಗಿ ಗಾಯಗೊಂಡಿದ್ದ. ಇದಕ್ಕಾಗಿ ಕಂಪನಿ ಚಿಕಿತ್ಸಾ ವೆಚ್ಚ ಭರಿಸಿತ್ತು. ಆದರೆ, ಶಿವೇಗೌಡ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಕಂಪೆನಿಯ ನಿರ್ದೇಶಕರೂ ಸೇರಿದಂತೆ ಹಲವರ ವಿರುದ್ಧದೂರು ದಾಖಲಿಸಿದ್ದ.
ಈ ದೂರಿನ ಅನ್ವಯ ಬಿಡದಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್‍ನಲ್ಲಿ ಕಂಪನಿಯ ಮೂವರು ವಿದೇಶಿ ನಿರ್ದೇಶಕರೂ ಸೇರಿದಂತೆ ಒಟ್ಟು 12 ಜನರ ವಿರುದ್ಧ ಆರೋಪ ಹೊರಿಸಲಾಗಿದೆ.
ಈ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಹೈ ಕೋರ್ಟ್ ನಲ್ಲಿ ಕ್ರಿಮಿನಲ್ ಅರ್ಜಿ ದಾಖಲಿಸಿದ್ದರು. ಅರ್ಜಿ ಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿ ದ್ದ ಪೀಠ ವಿಚಾರಣೆಗೆ ಅಂಗೀಕರಿಸಿತು. ಶಿವೇಗೌಡ ಹಾಗೂ ಪೊಲೀಸರು ಕಂಪನಿಯ ವಿರುದ್ಧ ಯಾವುದೇ ಒತ್ತಾಯ ಪೂರ್ವಕ ನಡವಳಿಕೆಗೆ ಮುಂದಾಗಬಾರದು ಎಂದು ನ್ಯಾಯಮೂರ್ತಿಗಳು ಆದೇಶಿಸಿ ವಿಚಾರಣೆ ಮುಂದೂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


