ಜಿಲ್ಲಾ ಸುದ್ದಿ

ಕೆಎಂಎಫ್ ಮಾದರಿ ಮಾಂಸ ಉತ್ಪಾದನಾ ಒಕ್ಕೂಟ: ಸಿಎಂ

ಕೆಎಂಎಫ್ ಮಾದರಿ ಮಾಂಸ ಉತ್ಪಾದನಾ ಒಕ್ಕೂಟ: ಸಿಎಂ
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಶು ಭವನ ಮತ್ತು ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
Published On :

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಮಾದರಿಯಲ್ಲೇ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿ ಗಾಹಿಗಳಿಗೆ ಭರವಸೆ ನೀಡಿದ್ದಾರೆ.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದ ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಶು ಭವನ ಮತ್ತು ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೆಎಂಎಫ್ ಸ್ಥಾಪನೆಯಾದ ಬಳಿಕ ರೈತರು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಅದರಂತೆ ತಲಾತಲಾಂತರದಿಂದ ಕುರಿ ಕಾಯುತ್ತಾ ಬಂದಿರುವ ಕುರಿಗಾಹಿಗಳ ಜೀವನಕ್ಕೆ ಭದ್ರತೆ ಒದಗಿಸಲು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಕೆಎಂಎಫ್ ರೀತಿಯಲ್ಲಿ ಮಾಂಸ ಉತ್ಪಾದಕ ಒಕ್ಕೂಟ ಸ್ಥಾಪಿಸಬಹುದೇ ಎಂಬುದನ್ನು ತಿಳಿಸಿದರೆ ಸರ್ಕಾರ ಸಹಕಾರ ನೀಡಲಿದೆ. ಒಂದೂರಿಂದ ಮತ್ತೊಂದೂರಿಗೆ ಕುರಿ ಮೇಯಿಸಲು ಹೋಗುವ ಅಲೆಮಾರಿ ಕುರಿಗಾಹಿಗಳು ತಮ್ಮನ್ನು ಹಾಗೂ ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಗನ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿತ್ತು. ಈಗಲೂ ಡಿಸಿಗಳಿಗೆ ಹೇಳುತ್ತೇನೆ, ಅಲೆಮಾರಿ ಕುರಿಗಾಹಿಗಳು ಗನ್ ಇಟ್ಟುಕೊಂಡರೆ ಕಳ್ಳರು ಕುರಿ ಕದಿಯಲು ಬರಲ್ಲ. ಬಂದರೆ ಗನ್ ತೋರಿಸಿ ಎದುರಿಸಿ ಎಂದರು. ಕುರಿಮೇಕೆಗಳ ಬಹೂಪಯೋಗಿ ಆಂಬುಲೇಟರಿ ಕ್ಲಿನಿಕ್‍ಗಳನ್ನು ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.