ಯೋಧರನ್ನು ಕಳೆದುಕೊಳ್ಳುತ್ತಿರುವುದು ದೇಶಕ್ಕೆ ಭರಿಸಲಾಗದ ನಷ್ಟ: ಸಂಸದ ರಾಜೀವ್ ಚಂದ್ರಶೇಖರ್

ದೇಶಕ್ಕಾಗಿ ಪ್ರಾಣತೆತ್ತ ಎನ್‍ಎಸ್‍ಜಿ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಸೇವೆ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯಸಭಾ...
ನಿರಂಜನ್ ಮೃತದೇಹ
ನಿರಂಜನ್ ಮೃತದೇಹ
Updated on: 

ಬೆಂಗಳೂರು: ದೇಶಕ್ಕಾಗಿ ಪ್ರಾಣತೆತ್ತ ಎನ್‍ಎಸ್‍ಜಿ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಸೇವೆ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರನ್ನು ಕಳೆದುಕೊಳ್ಳುತ್ತಿರುವುದು ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿರುವ ಅವರು,ಇ.ಕೆ.ಶಿವರಾಜನ್ ಅವರ ಕುಟುಂಬ ಮಹಾನ್ ಶಕ್ತಿಯೊಂದನ್ನು ಕಳೆದುಕೊಡಂತಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದೆ, ಅವರ ತಂದೆ ಶಿವರಾಜನ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ. ಈ ವೀರ ಯೋಧನ ಸಾಹಸ ಹಾಗೂ ತ್ಯಾಗವನ್ನು ನೆನೆದು ಹೃದಯ ಮರುಗಿತು. ಅವರ ಧೈರ್ಯಕ್ಕೊಂದು ಸಲಾಂ ಹೊಡೆಯಲೇಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ನಿರಂಜನ್ ಕುಮಾರ್ ಸ್ನೇಹಿತರನ್ನು ಮಾತನಾಡಿಸಿದಾಗ, ನಿರಂಜನ್ ಸ್ಫುದ್ರೂಪಿಯಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಯಶಸ್ವಿ ನಟ ಅಥವಾ ರೂಪದರ್ಶಿಯಾಗಬಹುದಿತ್ತು ಆದರೆ, ಸೇನೆಗೆ ಸೇರಿದರು. ಧೈರ್ಯದಿಂದ ಮುನ್ನುಗ್ಗಿ, ನೂರಾರು ಜನ ಸೈನಿಕರ ಪ್ರಾಣಉಳಿಸಿ ಹುತಾತ್ಮರಾಗಿ ದೇಶಕ್ಕೆಆದರ್ಶಪ್ರಾಯವಾಗಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ದೇಶ ಪ್ರತಿ ದಿನವೂ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದೆ. ನಮ್ಮ ವೀರ ಯೋಧರ ತ್ಯಾಗ, ಬಲಿದಾನವನ್ನು ನಾವು ನೆನೆಯುವುದಿಲ್ಲ. ಆದರೂ ನಾವೆಲ್ಲ ಸುರಕ್ಷಿತವಾಗಿರಲೆಂದು ಗಡಿಯಲ್ಲಿ ಧೈರ್ಯದಿಂದ ಹೋರಾಟ ನಡೆಸುವ  ಮತ್ತು ಪುರುಷ ಸೈನಿಕರನ್ನು ನಾವು ಸ್ಮರಿಸಬೇಕು, ಅವರ ತ್ಯಾಗಮಯ ಜೀವನ ಗಾಥೆಯನ್ನು ಮನಸ್ಸಿನಿಂದ ಮಾಸದಂತೆ ನೋಡಿಕೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com