ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನಿಟ್ರ್ಯಾಪ್: ಗಾಳಕ್ಕೆ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳ ಪುತ್ರರು

ಜನರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಜಾಲವೊಂದು ಶ್ರೀಮಂತ ಹುಡುಗರು ಹಾಗೂ ಹೈಫೈ ಪುರುಷರನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮೈಸೂರು: ಜನರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಜಾಲವೊಂದು ಶ್ರೀಮಂತ ಹುಡುಗರು ಹಾಗೂ ಹೈಫೈ ಪುರುಷರನ್ನು ಟಾರ್ಗೆಟ್ ಮಾಡಿ ಹಣ ದೋಚಲು ಹೊರಟಿದೆ. ಶ್ರೀಮಂತ ಯುವಕರ ಟಾರ್ಗೆಟ್ ಮಾಡುವ ಈ ಜಾಲಕ್ಕೆ ಸುಂದರ ಯುವತಿಯರೇ ಬಂಡವಾಳ, ಅವರ ಮಾತೇ ಗಾಳ. ಇವರು ಮೊದಲು ಹೈಫೈ ಯುವಕರ ನಂಬರ್‌ಗೆ ಕಾಲ್ ಮಾಡುತ್ತಾರೆ. ಬಳಿಕ ಸಾರಿ.., ಮಿಸ್ ಆಗಿ ಕಾಲ್ ಮಾಡಿದೆ ಎನ್ನುವ ಬಣ್ಣದ ಮಾತುಗಳನ್ನಾಡಿ ಬಲೆಗೆ ಬೀಳಿಸಿಕೊಳ್ಳುತ್ತಾರೆ.

ಹುಡುಗಿಯರ ಮೋಸದ ಮಾತಿಗೆ ಮರುಳಾದ ಮಂದಿ ಅವರೊಟ್ಟಿಗೆ ಒಡನಾಟ ಬೆಳೆಸುತ್ತಾರೆ. ಕೊನೆಗೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಯಾರಾದರೂ ನೋಡುತ್ತಾರೆ. ಹೀಗಾಗಿ ನಿರ್ಜನ ಪ್ರದೇಶಕ್ಕೆ ಬರುವಂತೆ ಕರೆಸಿಕೊಳ್ಳುತ್ತಾರೆ. ಅಲ್ಲಿಗೆ ಯುವಕ ಅಥವಾ ಪುರುಷ ಬಂದೊಡನೆ ಸಹೋದರನೆಂದು ಹೇಳಿಕೊಂಡು ಬರುವ ಜಾಲದ ತಂಡ ಆತನಿಗೆ ಹೊಡೆದು ಆತನ ಬಳಿ ಇರುವ ಹಣ, ಓಡವೆ ಎಲ್ಲವನ್ನೂ ಕಿತ್ತುಕೊಳ್ಳುತ್ತಾರೆ.

ಮೈಸೂರಿನಲ್ಲಿ ಬಯಲಾಗಿರುವ ಹನಿ ಟ್ರ್ಯಾಪ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳು, ಸರ್ಕಾರಿ ಅಧಿಕಾರಿಗಳು ಮಕ್ಕಳು ಸೇರಿದಂತೆ ಹಲವು ಶ್ರೀಮಂತರ ಮಕ್ಕಳೇ ಬಿದ್ದಿದ್ದಾರೆ. ಈ ಬಗ್ಗೆ ಸ್ವತಃ ಬಂಧನಕ್ಕೆ ಒಳಗಾಗಿರುವ ಜಾಲದ ಪ್ರಮುಖ ಕಿಂಗ್‌ಪಿನ್ ಅಮ್ರೀನಸಭಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆದರೆ ಮರ್ಯಾದೆಗೆ ಅಂಜಿ ಯಾರೊಬ್ಬರೂ ದೂರು ನೀಡಲು ಮುಂದಾಗುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯಕ್ಕೆ ಜಾಲದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಉದಯಗಿರಿ ಠಾಣೆ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com