ರಾಮದಾಸ್ ಪ್ರೇಮ ಪ್ರಕರಣ:. ಸಿಐಡಿ ಚಾರ್ಜ್‌ಶೀಟ್

ಮಾಜಿ ಸಚಿವ ರಾಮ ದಾಸ್ ಹಾಗೂ ಪ್ರೇಮ ಕುಮಾರಿ ಪ್ರೇಮ ಪ್ರಕರಣ ಸಂಬಂಧ ಮೈಸೂರು ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು 262 ಪುಟಗಳ ಸಿಐಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ...
ರಾಮದಾಸ್ ಮತ್ತು ಪ್ರೇಮಕುಮಾರಿ
ರಾಮದಾಸ್ ಮತ್ತು ಪ್ರೇಮಕುಮಾರಿ

ಮೈಸೂರು: ಮಾಜಿ ಸಚಿವ ರಾಮ ದಾಸ್ ಹಾಗೂ ಪ್ರೇಮ ಕುಮಾರಿ ಪ್ರೇಮ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರೇಮಕುಮಾರಿ ಅವರು ಇಬ್ಬರು ವಕೀಲರ ಜತೆ ಸೇರಿಕೊಂಡು ರಾಮಮದಾಸ್‌‌ರಿಂದ ಒಂದು ಕೋಟಿ ರೂ. ಬ್ಲಾಕ್ ಮೇಲ್ ಮಾಡಿದ್ದಾರೆಂದು ಮೈಸೂರು ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು 262 ಪುಟಗಳ ಸಿಐಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ರಾಜ್ಯದ ಗಮನ ಸೆಳೆದಿದ್ದ ರಾಮದಾಸ್ ಪ್ರೇಮ ಕುಮಾರಿ ಪ್ರೇಮ ಪುರಾಣ ಈಗ ಕೊನೆಯ ಹಂತಕ್ಕೆ ಬಂದಿದ್ದು, ಪ್ರೇಮಕುಮಾರಿ ಅವರು ರಾಮದಾಸ್ ಅವರನ್ನು ಇಬ್ಬರು ವಕೀಲರೊಟ್ಟಿಗೆ ಸೇರಿಕೊಂಡು ಒಂದು ಕೋಟಿಗೂ ಹೆಚ್ಚಿನ ಹಣಕ್ಕೆ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಸಿಐಡಿ ಮೈಸೂರಿನ ಕೋರ್ಟ್‌ಗೆ ಸುಮಾರು 262 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.

ನನ್ನ ರಾಮದಾಸ್ ಅವರದು ಗಂಡ ಹೆಂಡತಿ ಸಂಬಂಧ. ಇದರಲ್ಲಿ ಬ್ಲಾಕ್‌ಮೇಲ್ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಸಿಐಡಿ ತನ್ನ ಚಾರ್ಜ್‌ಶೀಟ್ ಸಲ್ಲಿಸಿದೆ. ಕೋರ್ಟ್‌ನಲ್ಲಿ ಮುಂದಿನ ಹೋರಾಟ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com