ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಬೈಕ್‍ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಮಾವು ಸಂಚಾರ ಠಾಣೆಯಲ್ಲಿ ಶುಕ್ರವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಬೈಕ್‍ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಮಾವು ಸಂಚಾರ ಠಾಣೆಯಲ್ಲಿ ಶುಕ್ರವಾರ ನಡೆದಿದೆ.

ಕೋಣನಕುಂಟೆಯ ಸಿಲಿಕಾನ್ ಸಿಟಿ ಕಾಲೇಜಿನ ಅಂತಿಮ  ಬಿಕಾಂ ವಿದ್ಯಾರ್ಥಿ ಶಿವರಾಜ್ (19) ಮೃತಪಟ್ಟವನು. ವೀವರ್ಸ್ ಕಾಲೋನಿ ನಿವಾಸಿಗಳಾ ದ ಶಿವರಾಜ್ ಹಾಗೂ ಗೋಪಾಲಕೃಷ್ಣ ಸ್ನೇಹಿತರಾಗಿದ್ದು, ಮಕರ ಸಂಕ್ರಾಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ 5.45ರ ಸುಮಾರಿಗೆ ತನ್ನ ಸ್ನೇಹಿತ ಬಿಬಿಎಂ ವಿದ್ಯಾರ್ಥಿ ಗೋಪಾಲಕೃಷ್ಣನ ಜೊತೆ ಬೈಕ್‍ನಲ್ಲಿ ಘಾಟಿ ಸುಬ್ರಹ್ಮಣ್ಯ ದೇವಾಲ ಯಕ್ಕೆ ನೈಸ್ ರಸ್ತೆ ಮೂಲಕ ಹೋಗುತ್ತಿದ್ದರು.

ನೈಸ್ ಜಂಕ್ಷನ್ ಬಳಿಯ ಇಕ್ಕಟ್ಟಿನ ತಿರುವಿನಲ್ಲಿ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಹಿಂಬದಿ ಕುಳಿತಿದ್ದ ಶಿವರಾಜ್ ಗೆ ಲಾರಿಯ ಹಿಂದಿನ ಚಕ್ರ ರಭಸವಾಗಿ ಅಪ್ಪಳಿಸಿದ ಪರಿಣಾಮ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೋಲಾಲ ಕೃಷ್ಣಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com