ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

'ಗ್ರಾಪಂ ಸದಸ್ಯರು ಬಿಜೆಪಿ ತೊರೆದಿಲ್ಲ'
ಸೂಲಿಬೆಲೆ:
ಸೂಲಿಬೆಲೆ ಗ್ರಾಪಂಗೆ ಚುನಾಯಿತರಾಗಿರುವ ಕೆಲ ಸದಸ್ಯರು ಇತ್ತೀಚೆಗೆ ಬಿಜೆಪಿಯನ್ನು ತೊರದು ಕಾಂಗ್ರೆಸ್ ಸೇರಿದ್ದಾರೆಂಬುದು ಸತ್ಯಕ್ಕೆ ದೂರುವಾಗಿದ್ದು ಈ ಸದಸ್ಯರು ಬಿಜೆಪಿಯಲ್ಲಿಯೇ ಸಕ್ರಿಯವಾಗಿದ್ದಾರೆ ಎಂದು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್ ಗೌಡ ಹೇಳಿದ್ದಾರೆ.
ಪಿ.ಬಿ. ಶ್ರೀನಿವಾಸ್ಗೆ ನುಡಿನಮನ
ವಿಜಯಪುರ:
ಪಿಬಿಎಸ್ ಅವರು ಗಾಯಕರಷ್ಟೇ ಅಲ್ಲದೆ ಹಾಡುಗಳನ್ನು ರಚಿಸಿದ ಸಾಹಿತಿ ಯಾಗಿದ್ದರು. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕಸಾಪ ತಾಲೂಕು ಅಧ್ಯಕ್ಷ ಎನ್.ರಾಜ್ಗೋಪಾಲ್ ತಿಳಿಸಿದರು. ಅವರು ಪಟ್ಟಣದ ಗಾಂಧಿ ಚೌಕದಲ್ಲಿರುವ ಕಸಾಪ ಕಚೇರಿಯಲ್ಲಿ ತಾಲೂಕು ಕಸಾಪ, ಕರ್ನಾಟಕ ಮಿತ್ರ ಸಂಘ ಮತ್ತು ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಗಾಯಕ ಪಿಬಿಎಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ದಕ್ಷಿಣ ಭಾರತದ ಅನೇಕ ನಟರ ಹಾಡುಗಳಿಗೆ ತಮ್ಮ ಮಾಧುರ್ಯ ತುಂಬಿದ್ದರು. ಕೆಲ ಕಲಾವಿದರು ಕರ್ನಾಟಕದಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ಹೆಸರು ಮಾಡಿದರೆ ಪಿಬಿಎಸ್ ಅವರು ಆಂಧ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹೆಸರಾಂತ ಗಾಯಕರಾಗಿ ಹೆಸರು ಮಾಡಿದ್ದಾರೆ ಎಂದರು. ಹಿರಿಯ ಕಲಾವಿದ ಶೇಷಗಿರಿ ರಾವ್, ಕಸಾಪ ಗೌರವ ಕಾರ್ಯದರ್ಶಿ ವಿ.ಎನ್.ರಮೇಶ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಚಂದ್ರಶೇಖರ್ ಹಡಪದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಪುರ ಶಾಖೆಯ ಬಿ.ಡಿ.ಅಂಡ್.ಬಿ.ಆರ್.ಡಿ.ಸಿ.ಸಿ ಬ್ಯಾಂಕ್ ಪ್ರಬಂಧಕ ಪ್ರಕಾಶ್ ಪಿಬಿಎಸ್ ಅವರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಟೌನ್ ಅಧ್ಯಕ್ಷ ಮುನಿವೀರಣ್ಣ, ಕವಿ, ಮಾ,ಸುರೇಶ್ ಬಾಬು, ಕೆ.ಎಚ್.ಚಂದ್ರಶೇಖರ್,ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಬಿಜೆಪಿ ಬಂಡಾಯ:  ನಾಮಪತ್ರ ಸಲ್ಲಿಕೆ
ದೇವನಹಳ್ಳಿ
: ದೇವನಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಹಳ ದಿನಗಳಿಂದ ಆಕಾಂಕ್ಷಿಗಳಾಗಿದ್ದ ಡಿ.ಆರ್.ನಾರಾಯಣಸ್ವಾಮಿ ಹಾಗೂ ಎಸ್.ಜಿ.ನಾರಾಯಣಸ್ವಾಮಿ  ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಪಕಕ್ಕೆ ಗುಡ್ ಬೈ ಹೇಳಿದರು.  ಡಿ.ಆರ್.ನಾರಾಯಣಸ್ವಾಮಿ ಅವರು ಬಿಎಸ್ಆರ್ ಕಾಂಗ್ರೆಸ್ನಿಂದಲೂ ಹಾಗೂ ಎಸ್.ಜಿ.ನಾರಾಯಣಸ್ವಾಮಿ ಪಕ್ಷೇತರರಾಗಿ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.