ಬೆಂಗಳೂರು ಗ್ರಾಮಾಂತರ

ನಮ್ಮ ಮತ ಮಾರಾಟಕ್ಕಿಲ್ಲ..

Published On :

ಕ.ಪ್ರ.ವಾರ್ತೆ  ಬೆಂಗಳೂರು  ಏ.24
'ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ...'
ಎಂದು ಪ್ರತಿಯೊಬ್ಬರು ಪ್ರತಿಜ್ಞೆ ಮಾಡುವ ಮೂಲಕ ಉತ್ತಮ ಪಕ್ಷ ಅಧಿಕಾರಕ್ಕೆ ಬರಲು ನಿಮ್ಮ ಮತ ಉಪಯೋಗಿಸಿ ಎಂದು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಬುಧವಾರ ಜೈ ಭುವನೇಶ್ವರಿ ನಗರದ ನಿವಾಸಿಗಳಿಗೆ ಅರಿವು ಮೂಡಿಸಿದರು. ಗ್ರಾ.ಪಂ.ಹಕ್ಕೊತ್ತಾಯ ಆಂದೋಲನದ ರಾಜ್ಯ ಸಂಚಾಲಕ ದಾಮೋದರ ಆಚಾರ್ಯ ಮಾತನಾಡಿ, ಪ್ರತಿಯೊಂದು ಪಕ್ಷ ಕೇವಲ ಪ್ರಣಾಳಿಕೆಯಲ್ಲಿ ಮಾತ್ರವೇ ವಿವಿಧ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿ ಮತದಾರರನ್ನು ಮರಳು ಮಾಡಿ ಮತಯಾಚಿಸುತ್ತಾರೆ. ನಿಮ್ಮ ಮತದ ಮೌಲ್ಯ ಏನು ಎಂಬುವುದು ನಿಮಗೆ ತಿಳಿದಿರಲಿ ಕೇವಲ 500 ಅಥವಾ ಸೀರೆಗೆ ನಿಮ್ಮ ಅಮೂಲ್ಯ ಮತ ಮಾರಿಕೊಳ್ಳಬೇಡಿ ಎಂದು  ಹೇಳಿದರು.
ಒಂದು ಪಕ್ಷ 1ಕ್ಕೆ ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಹೇಳುತ್ತದೆ. ಇದೆಲ್ಲಾ ಸಾಧ್ಯ ಗೊತ್ತಾ? ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ನೀಡಿ ಎಂದರು.
ಅಪ್ಸಾ ಸಂಸ್ಥೆ ಸಂಸ್ಥಾಪಕ ಸದಸ್ಯ ಲಕ್ಷ್ಮೀಪತಿ, ಜನರಿಂದ ತೆಗೆದುಕೊಂಡ ಪ್ರತಿ ಹಣಕ್ಕೂ ಲೆಕ್ಕ ನೀಡುವ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ವ್ಯಕ್ತಿಗಳಿಗೆ ಮತ ನೀಡಿ. ಪ್ರತಿಯೊಬ್ಬರು ನಿಮ್ಮ ಮನೆಯ ಬಾಗಿಲ ಮೇಲೆ 'ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ' ಎಂಬ ಭಿತ್ತಿ ಪತ್ರ ಅಂಟಿಸಿಕೊಳ್ಳಿ ಎಂದು ಹೇಳಿದರು. ಅಪ್ಸಾ ಸಂಸ್ಥೆ ಸಂಶೋಧನಾಧಿಕಾರಿ ಕೆ.ಬಿ.ಸುರೇಶ, ರಾಮಕುಮಾರ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.