ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಕ್ಕೆ ಆಗ್ರಹ
ಮಾಗಡಿ: ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮಾಡಬಾಳ್ ಹೋಬಳಿ ಘಟಕದ ಕರವೇ ಅಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ. ಕೋಟೆ ಮೈದಾನದಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ, ಮಳೆ ಬಂದರಂತೂ ಕೋಟೆ ಮೈದಾನ ಕೆಸರುಗದ್ದೆಯಂತಾಗಿರುತ್ತದೆ. ಮಾಗಡಿ ಪಟ್ಟಣದಲ್ಲಿ ನಡೆಯುತ್ತಿರುವ ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣ ಕಾಮಗಾರಿ ಸ್ಥಿಗಿತಗೊಂಡಿದ್ದು, ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗಿದೆ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಕರವೇ ನೇತೃತ್ವದಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಅಧ್ಯಕ್ಷ ಗೆಜ್ಜಗಾರಕುಪ್ಪೆ ಜಗದೀಶ್ ಎಚ್ಚರಿಸಿದ್ದಾರೆ.
ಸೂಲಿಬೆಲೆ ಗಂಗಮ್ಮ ದೇಗುಲದಲ್ಲಿ ಕಳ್ಳತನ
ಸೂಲಿಬೆಲೆ: ಇಲ್ಲಿನ ಗಿಡ್ಡಪ್ಪನಹಳ್ಳಿ ರಸ್ತೆಯಲ್ಲಿರುವ ಗಂಗಮ್ಮ ದೇಗುಲದಲ್ಲಿ ಕಳ್ಳತನ ನಡೆದಿದ್ದು, ಚಿನ್ನಾಭರಣ ಸೇರಿದಂತೆ ನಗದು ಹುಂಡಿ ದೋಚಿ ಪರಾರಿಯಾಗಿದ್ದಾರೆ. ಸೂಲಿಬೆಲೆ ಹೊರ ಭಾಗದಲ್ಲಿರುವ ಗಂಗಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕೈ ಚಳಕ ತೋರಿಸಿರುವ ಕಳ್ಳರು ದೇಗುಲದ ಬಾಗಿಲು ಮುರಿದು ದೇವರ ವಿಗ್ರಹದ ಮೇಲಿದ್ದ ಒಡುವೆಗಳನ್ನು ಕದ್ದು ಹೋಗಿದ್ದಾರೆ. ದೇಗುಲದಲ್ಲಿ ಇಟ್ಟಿದ್ದ ಹುಂಡಿಯನ್ನು ಎತ್ತಿಕೊಂಡು ಹೋಗಿ ಅದರಲ್ಲಿದ್ದ ಹಣವನ್ನು ಲಪಟಾಯಿಸಿ ಖಾಲಿ ಹುಂಡಿಯನ್ನು ದೇಗುಲ ಪಕ್ಕದ ನೀಲಗಿರಿ ತೋಪಿನಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಕೆಲ ದಿನಗಳಿಂದ ಸೂಲಿಬೆಲೆ ಪಟ್ಟಣದ ಕೆಲ ವಾರ್ಡುಗಳಲ್ಲಿ ಸಪಲಮ್ಮ ದೇವಿಯ ಜಾತ್ರೆ ಇತ್ತು. ಇದರ ಅಂಗವಾಗಿ ದೇವಿಯ ಮೈಮೇಲೆ ಚಿನ್ನಾಭರಣಗಳನ್ನು ಹಾಕಲಾಗಿತ್ತು. ದೇಗುಲ ಸಮಿತಿಯವರು ಸೂಲಿಬೆಲೆ ಪೊಲೀಸರಗೆ ದೂರುನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗೃಹಿಣಿ ನೇಣಿಗೆ ಶರಣು
ರಾಮನಗರ: ಹೊಟ್ಟೆನೋವು ತಾಳಲಾರದೆ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚನ್ನಪಟ್ಟಣದವರಾದ ಅಶ್ವಿನಿ(21) ಮೃತ ದುರ್ದೈವಿ. ಈಕೆಯನ್ನು ಒಂದು ವರ್ಷದ ಹಿಂದೆ ನಗರ ವ್ಯಾಪ್ತಿಯ ಚಾಮುಂಡಿ ಪುರದ ನಿವಾಸಿ ಶಿವರಾಜು ಎಂಬುವರ ಜತೆ ವಿವಾಹ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

