ಬೆಂಗಳೂರು ಗ್ರಾಮಾಂತರ

ವ್ಯಕ್ತಿತ್ವ ವಿಕಸನ ಶಿಬಿರ

Published On :

ಬೆಂಗಳೂರು: ಟ್ರಾನ್ಸ್‌ಫಾರ್ಮೆಷನ್ ಅನ್‌ಲಿಮಿಟೆಡ್ ವತಿಯಿಂದ ಜೀವನೋತ್ಸಾಹ ಎಂಬ ಒಂದು ದಿನದ ವ್ಯಕ್ತಿತ್ವ ವಿಕಸನದ ತರಬೇತಿ ಶಿಬಿರ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ತರಬೇತುದಾರ ಜಯಪ್ರಕಾಶ್‌ನಾಗತಿಹಳ್ಳಿ ತರಬೇತಿ ನೀಡಲಿದ್ದಾರೆ. ತರಬೇತಿಯು ಊರ್ವಶಿ ಚಿತ್ರಮಂದಿರದ ಬಳಿ ಇರುವ ಸ್ಪ್ರಿಂಗ್ಸ್ ಹೊಟೇಲ್ ಮತ್ತು ಸ್ಪಾನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ- 9538881681, 9538881685.
ಅನಿಲ್‌ಕುಮಾರ್‌ಗೆ ಪಿಎಚ್.ಡಿ
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಬಿ.ಅನಿಲ್‌ಕುಮಾರ್ ಮಂಡಿಸಿದ 'ಎಕ್ಸ್‌ಪೆರಿಮೆಂಟಲ್ ಸ್ಟಡೀಸ್ ಆನ್ ಲ್ಯಾಮಿನೇಟೆಡ್ ಕಂಪೋಸಿಟ್ಸ್ ಸಬ್ಜೆಕ್ಟ್ ಟು ಇಂಪ್ಯಾಕ್ಟ್ ಲೋಡಿಂಗ್‌' ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಕೆ.ಶಿವಾನಂದ್ ಮಾರ್ಗದರ್ಶಕರಾಗಿದ್ದರು.
ಲಕ್ಷ್ಮೀನರಸಮ್ಮಗೆ ಪಿಎಚ್.ಡಿ
ಚಿಂತಾಮಣಿಯ ಸರ್ಕಾರಿ ಪದವಿ ಕಾಲೇಜು ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಲಕ್ಷ್ಮೀನರಸಮ್ಮ ಮಂಡಿಸಿದ 'ಕನ್ನಡ ಜನಪದ ಮಹಾಕಾವ್ಯಗಳು- ಒಂದು ತೌಲನಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಲಾಲ್‌ಬಹದ್ದೂರ್‌ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೆ.ರುಕ್ಮಿಣಿ ಮಾರ್ಗದರ್ಶಕರಾಗಿದ್ದರು.
ವೀರಶೈವ ವಧು-ವರರ ಮುಖಾಮುಖಿ
ಲಿಂಗಾಯತ ಕಲ್ಯಾಣ ಟ್ರಸ್ಟ್ ವತಿಯಿಂದ ವೀರಶೈವ ವಧು-ವರರಿಗೆ 65ನೇ ವಿಶೇಷ ಮುಖಾ-ಮುಖಿ ಸಮಾವೇಶವನ್ನು ಆ.11ರಂದು ಹಮ್ಮಿಕೊಳ್ಳಲಾಗಿದೆ. ವೈದ್ಯರು, ಎಂಜಿನಿಯರ್‌ಗಳು, ಪಿ.ಜಿ.ಪದವೀಧರರು ಮತ್ತು ಅನಿವಾಸಿ ಭಾರತೀಯ, ವೀರಶೈವ ವಧುವರರು ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 22269237.
ಸಮ್ಮೋಹನ ಶಿಬಿರ
ಮಾನಸ ಸಲಹಾ ಮತ್ತು ಸಮ್ಮೋಹನ ಚಿಕಿತ್ಸಾ ಕೇಂದ್ರವು ಆ.10 ಮತ್ತು 11ರಂದು ಎರಡು ದಿನಗಳ 'ಪ್ರಾಕ್ಟಿಕಲ್ ಸ್ವಯಂ-ಸಮ್ಮೋಹನ ಶಿಬಿರ' ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ಒತ್ತಡ ರಹಿತ ಮನಸ್ಸು, ನಿದ್ರಾಹೀನತೆ ನಿವಾರಣೆ, ಮಧುಮೇಹ, ಬಿಪಿ, ಆತ್ಮವಿಶ್ವಾಸ ವೃದ್ಧಿ, ಜ್ಞಾಪಕ ಶಕ್ತಿ ವೃದ್ಧಿ ಇನ್ನಿತರ ಕೌಟುಂಬಿಕ ಸಮಸ್ಯೆಗಳ ನಿವಾರಣೆಗಾಗಿ ಸ್ವಯಂ-ಸಮ್ಮೋಹನ ವಿಧಾನಗಳನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ- 23486186, 9741225966.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.