ಸುದ್ದಿ ಸಂಕ್ಷೇಪ
ಸಿಪಿಎಂ ರಕ್ತದಾನ ಶಿಬಿರ ಇಂದು
ದೊಡ್ಡಬಳ್ಳಾಪುರ: ಡಾ.ಅಂಬೇಡ್ಕರ್ ಅವರ 57ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಸಿಪಿಐ(ಎಂ)ನ ದಲಿತ ಹಕ್ಕುಗಳ ಸಮಿತಿ ದೊಡ್ಡಬಳ್ಳಾಪುರ ತಾಲೂಕು ಘಟಕದ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಡಿ.9ರ ಸೋಮವಾರ ಕನ್ನಡ ಜಾಗೃತ ಭವನದಲ್ಲಿ ಬೆಳಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ.ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಉದ್ಘಾಟಿಸಲಿದ್ದಾರೆ. ತಾಲೂಕು ಕಾರ್ಯದರ್ಶಿ ಬಿ.ಜಿ.ಹೇಮಂತರಾಜು, ನಗರಸಭಾ ಸದಸ್ಯ ರವಿಕುಮಾರ್, ತಾ.ಪಂ ಉಪಾಧ್ಯಕ್ಷ ಕೆ.ಮುನಿಯಪ್ಪ, ದಲಿತ ಹಕ್ಕುಗಳ ಸಮಿತಿ ಉಪಾಧ್ಯಕ್ಷ ಟಿ.ಗಂಗಾಧರಪ್ಪ ಭಾಗವಹಿಸಲಿದ್ದಾರೆ. ಅಧ್ಯಕ್ಷ ಅಂಜನಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
'ರೈತರ ಹಿತಕ್ಕೆ ಸರ್ಕಾರ ಬದ್ಧ'
ಹೊಸಕೋಟೆ : ರೈತರು ನೈಸರ್ಗಿಕ ವಿಪತ್ತುಗಳಿಂದ ಅನುಭವಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಸರಕಾರ ಬದ್ಧವಾಗಿದೆ ಎಂದು ಕೃಷಿ, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಪಟ್ಟಣದ ಪಶು ಅಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಳೆದ 2-3 ತಿಂಗಳಲ್ಲಿ ಕಾಲುಬಾಯಿ ಜ್ವರದ ಸೋಂಕಿನಿಂದ ಅನೇಕ ರಾಸುಗಳು ಮೃತಪಟ್ಟಿದ್ದು ಹೈನುಗಾರಿಕೆ ಅವಲಂಬಿತ ರೈತರು ತೀವ್ರ ಆರ್ಥಿಕ ನಷ್ಟಕ್ಕೊಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ರೈತರಿಗೆ ನೆರವು ನೀಡಿ ಜೀವನ ಭದ್ರತೆಗೆ ಪರಿಹಾರ ನೀಡುತ್ತಿದೆ. ರೈತರು ವಿಚಲಿತರಾಗದೆ ಸರಕಾರ ನೀಡಿರುವ ಪರಿಹಾರವನ್ನು ಸದುಪಯೋಗಪಡಿಸಿಕೊಂಡು ವೃತ್ತಿ ಮುಂದುವರಿಸಬೇಕು ಎಂದರು.ಶಾಸಕ ನಾಗರಾಜ್ ಮಾತನಾಡಿ ತಾಲೂಕಿನ 104 ಗ್ರಾಮಗಳಲ್ಲಿ 2168 ರಾಸುಗಳಿಗೆ ಸೋಂಕು ಹರಡಿದೆ. ಲಸಿಕೆ ಹಾಕಿಸಿದ್ದ ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದ 1865 ರಾಸುಗಳಲ್ಲಿ ಚೇತರಿಕೆ ಕಂಡುಬಂದಿದೆ. 141ದನ, ಎಮ್ಮೆ, 82ಪಡ್ಡೆಗಳು, 81ಕರುಗಳು ಸೇರಿದಂತೆ 304 ರಾಸುಗಳು ಮೃತಪಟ್ಟಿವೆ. 23 ರಾಸುಗಳು ಮಾತ್ರ ವಿಮೆಗೊಳಪಟ್ಟಿವೆ. 117 ದನ, ಎಮ್ಮೆಗಳಿಗೆ ರಾಜ್ಯ ಸರಕಾರ 16,400ರೂ., ಕೆಎಂಎಫ್ ವತಿಯಿಂದ 8,600ರು. ಒಳಗೊಂಡಂತೆ 25 ಸಾವಿರ ರು. 82ಪಡ್ಡೆಗಳಿಗೆ ತಲಾ 10,000 ರು.,81ಕರುಗಳಿಗೆ ತಲಾ 5,000 ರು.ಸೇರಿದಂತೆ ಒಟ್ಟು 280 ರಾಸುಗಳಿಗೆ 41.50ಲಕ್ಷ ರು.ಪರಿಹಾರ ನೀಡಿದೆ. ಗ್ರಾಮಾಂತರ ಜಿಲ್ಲೆಗೆ ನಿಗದಿಪಡಿಸಿರು. 62 ಲಕ್ಷ ಪಾಲನ್ನು ಪಡೆದುಕೊಂಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

