ಕಾಡಾನೆ ಉಪಟಳ; ರೈತರ ಕಳವಳ
ಮಾಗಡಿ: ಕಾಡಾನೆಗಳ ಉಪಟಳಕ್ಕೆ ಅಡಿಕೆ ತೋಟ, ರಾಗಿ ಬಣವೆಗಳು ನಾಶವಾಗಿದ್ದು, ರೈತರು ಆಂತಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೋನಿಯ 6 ಬಡ ಕುಟಂಬಗಳಿಗೆ ಸೇರಿದ 5 ರಾಗಿ ಬಣವೆಗಳು, ಒಂದು ಆಡಿಕೆ ತೋಟ ಕಾಡಾನೆಗಳ ಉಪಟಳಕ್ಕೆ ನಾಶವಾಗಿದ್ದು, ಸುಮಾರು ರು.1 ಲಕ್ಷ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಟ್ಟಹಳ್ಳಿ ಕಾಲೋನಿಯ ಜಯಮ್ಮ ಅವರಿಗೆ ಸೇರಿದ ಅಡಿಕೆ ತೋಟ ನಾಶವಾಗಿದ್ದರೆ, ಗಂಗಮ್ಮ, ಕೆಂಪಮ್ಮ, ಗಂಗಭೈಲಯ್ಯ, ಪುಟ್ಟನರಸಯ್ಯ ಹಾಗೂ ಸಿದ್ದಮ್ಮ ಅವರಿಗೆ ಸೇರಿದ 5 ರಾಗಿ ಬಣವೆ ನಾಶವಾಗಿವೆ.
ಆರು ಕಾಡಾನೆಗಳು ಬೆಟ್ಟಹಳ್ಳಿ ಕಾಲೋನಿ ಕಾಡಿನಂಚಿನಲ್ಲಿ ಬೀಡು ಬಿಟ್ಟಿದ್ದು, ಬೆಟ್ಟದ ಅಂಚಿನಲ್ಲಿರುವ ರೈತರ ಹೊಲ,ಗದ್ದೆ, ತೋಟಗಳಿಗೆ ಲಗ್ಗೆಯಿಟ್ಟು ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಈಗಾಗಲೇ ನಾಲ್ಕು ಬಾರಿ ರೈತರ ಬೆಳೆಗಳಿಗೆ ಲಗ್ಗೆಯಿಟ್ಟಿರು ಕಾಡಾನೆಗಳು ಲಕ್ಷಾಂತರ ರು ಬೆಳೆಗಳನ್ನು ತಿಂದು ನಾಶ ಮಾಡಿವೆ. ಆದರೂ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡಿಲ್ಲ, ಹೀಗಾದರೆ ಬಡ ರೈತರಾದ ನಮ್ಮ ಜೀವ ರಕ್ಷಣೆ ಹೇಗೆ, ಬದುಕಿಗೆ ಆಧಾರವಾಗಿದ್ದ ಬೆಳೆಗಳು ನಾಶವಾಗಿದ್ದು,ಆರ್ಥಿಕ ಪರಿಸ್ಥಿತಿ ಬಿಗುಡಾಯಿಸಿದೆ. ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಬೆಳೆ ಕಳೆದುಕೊಂಡಿರುವ ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಕಾಡಾನೆಗಳ ಉಪಟಳಕ್ಕೆ ಇಷ್ಟೆಲ್ಲ ನಷ್ಟ ಅನುಭವಿಸುತ್ತಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ, ಬೆಳೆ ನಷ್ಟ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರ ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಬೆಟ್ಟಹಳ್ಳಿ ಕಾಲೋನಿಗೆ ಭೇಟಿ ನೀಡಿ ಕಾಡಾನೆ ಉಪಟಳದಿಂದ ನಷ್ಟವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ಸದ್ಯದಲ್ಲೇ ನೀಡಬೇಕು. ಇಲ್ಲದಿದ್ದರೆ. ರೈತರೆಲ್ಲರೂ ಅರಣ್ಯ ಇಲಾಖೆಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹಿರಿಯ ಮುಖಂಡರಾದ ಪಾತರಾಜು, ಹನುಮಂತರಾಜು, ಭೈರೇಶ್, ಗಂಗಭೈಲಯ್ಯ,ಕೆಂಚಪ್ಪ ಇತರರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

