ಬೆಂಗಳೂರು ಗ್ರಾಮಾಂತರ

ಚಿರತೆ ದಾಳಿ: 4 ಕುರಿ ಬಲಿ

Published On :

ಹಲಗೂರು: ಸಮೀಪದ ನಿಟ್ಟೂರು ಗ್ರಾಮದಲ್ಲಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿ ಸುಮಾರು ಐವತ್ತು ಸಾವಿರ ನಷ್ಟ ಸಂಭವಿಸಿರುವ ಘಟನೆ ನಡೆದಿದೆ. ನಿಟ್ಟೂರು ಗ್ರಾಮದ ಮುತ್ತಯ್ಯ ಎಂಬವರ ಮನೆಯ ಮುಂದೆ ಇರುವ ಕುರಿಗಳ ಕೊಪ್ಪಲಿಗೆ ಸೋಮವಾರ ರಾತ್ರಿ ಚಿರತೆ ದಾಳಿ ಮಾಡಿ ನಾಲ್ಕು ಕುರಿಗಳನ್ನು ಸಾಯಿಸಿದೆ. ನಾಯಿಗಳ ಬೊಗಳುವಿಕೆಯ ಸದ್ದಿನಿಂದ ಎದ್ದ ಮುತ್ತಯ್ಯ ಚಿರತೆಯನ್ನು ಗ್ರಾಮಸ್ಥರೊಡನೆ ಓಡಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಆರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.  ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹಾಗೂ ಕುರಿಗಳನ್ನು ಕಳೆದುಕೊಂಡ ಮುತ್ತಯ್ಯನಿಗೆ ಪರಿಹಾರ ನೀಡುವಂತೆ ಗ್ರಾಪಂ ಸದಸ್ಯರಾದ ನಿಟ್ಟೂರು ನಾಗೇಶ್ ಮತ್ತು ಮರೀಸ್ವಾಮಿ ಆಗ್ರಹಿಸಿದ್ದಾರೆ.

ಕಳ್ಳತನಕ್ಕೆ ಬಂದು ಹಿಗ್ಗಾಮುಗ್ಗಾ ಗೂಸಾ ತಿಂದ್ರು
ದೊಡ್ಡಬಳ್ಳಾಪುರ: ನಡುರಾತ್ರಿಯಲ್ಲಿ ಕಳವು ಮಾಡಲು ಬಂದ ನಾಲ್ವರು ಸಾರ್ವಜನಿಕರ ಕೈಗೆ ಸಿಕ್ಕಿ ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಘಟನೆ ಸೋಮವಾರ ರಾತ್ರಿ ದೊಡ್ಡಬಳ್ಳಾಪುರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದಿದೆ. ಆರೋಪಿಗಳು ನೆಲಮಂಗಲದ ಗಂಗರಾಜು, ಚಂದ್ರ, ಹುಬ್ಬಳ್ಳಿ ಮೂಲದ ದೇವರಾಜ, ಸುರೇಶ್ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಲಕ್ಷ್ಮೀನಾರಾಯಣರೆಡ್ಡಿ ಎಂಬುವವರ ಮನೆ ಮುಂದೆ ಅರ್ಧರಾತ್ರಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತ, ಮನೆ ಮುಂದೆ ಜೋಡಿಸಿಟ್ಟಿದ್ದ ಸೆಂಟ್ರಿಂಗ್ ಶೀಟುಗಳನ್ನು ಟಾಟಾ ಏಸ್ ವಾಹನಕ್ಕೆ ತುಂಬಿಕೊಂಡು ಕಳವು ಮಾಡಲು ಯತ್ನಿಸಿದ ವೇಳೆ ಸುತ್ತಮುತ್ತಲ ಜನ ಈ ನಾಲ್ವರನ್ನು ಸ್ಥಳದಲ್ಲೇ ಹಿಡಿದು ಥಳಿಸಿದ್ದಾರೆ. ಕಳುವು ಮಾಡುವ ಮುನ್ನ ರಸ್ತೆಯ ಬೀದಿದೀಪಗಳನ್ನು ಆರಿಸಿ, ಸುತ್ತಮುತ್ತಲ ಮನೆಗಳ ಮುಂಬಾಗಿಲ ಚಿಲಕಗಳನ್ನು ಜಡಿದು ಜಾಣತನ ಮೆರೆಯಲೆತ್ನಿಸಿರುವ ಆರೋಪಿಗಳು ಒದೆ ತಿಂದು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಳೆದ 1 ತಿಂಗಳಿಂದೀಚೆಗೆ ಈ ರೀತಿಯಾಗಿ ಸೆಂಟ್ರಿಂಗ್ ಶೀಟುಗಳು ಹಲವು ಬಾರಿ ಕಳುವಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯರೇ ಹೊಂಚು ಹಾಕಿ ಕಾದು ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದು, ನಂತರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಮತ್ತು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.