ಬೆಂಗಳೂರು ಗ್ರಾಮಾಂತರ

ಸಮಾಧಿ ಮೇಲೆ ಸೌಧ...

Published On :

ಬೆಂಗಳೂರು-ಮೈಸೂರು ಮಾರ್ಗದಲ್ಲಿ ವಾಹನಗಳ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ನಡುವಿನ ಎಲ್ಲ ನಗರ, ಪಟ್ಟಣಗಳಲ್ಲಿ ಮೇಲು ಸೇತುವೆ ನಿರ್ಮಾಣ ಮಾಡುವ ಘೋಷಣೆಯು ಈ ಭಾಗದ ಅಭಿವೃದ್ಧಿಗೆ ದೊಡ್ಡ ಪೆಟ್ಟು ನೀಡಿದಂತೆಯೇ ಸರಿ. ಹಿಂದಿನ ಸರ್ಕಾರದಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿತ್ತು. ಅದನ್ನೀಗ ಮೇಲು ಸೇತುವೆಯನ್ನಾಗಿ ಪರಿವರ್ತಿಸಿ ರಾಮನಗರ ಮತ್ತು ಮಂಡ್ಯದ ಅಭಿವೃದ್ಧಿಯ ಸಮಾಧಿ ಮೇಲೆ ಬೆಂಗಳೂರು ಮತ್ತು ಮೈಸೂರಿನ ಸೌಧ ನಿರ್ಮಾಣಕ್ಕೆ ಸಿದ್ದರಾಮಯ್ಯ ಹೊರಟಿದ್ದಾರೆ.


ಪ್ರತೀಕಾರ ಕ್ರಮವೇ?


ಸಿದ್ದರಾಮಯ್ಯ ರಾಮನಗರ ಜಿಲ್ಲೆಯನ್ನು ಕಡೆಗಣಿಸುವ ಮೂಲಕ ಒಂದೆಡೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಇನ್ನೊಂದೆಡೆ ಸಚಿವ ಸ್ಥಾನ ವಂಚಿತ ಸ್ವಪಕ್ಷೀಯ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತೀಕಾರಕ್ಕೆ ಇಳಿದರೇ ಎನ್ನುವ ಪ್ರಶ್ನೆ ಇಲ್ಲಿನವರನ್ನು ಸಹಜವಾಗಿಯೇ ಕಾಡುತ್ತಿದೆ. ಬಿಜೆಪಿ ಸರ್ಕಾರವು ಕುಮಾರಸ್ವಾಮಿ ಕಾರಣಕ್ಕಾಗಿಯೇ ರಾಮನಗರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಜೀವ್ ಗಾಂಧಿ ಆರೋಗ್ಯ ವಿವಿ  ಸ್ಥಾಪನೆಗೆ ಹಿಂದೇಟು ಹಾಕಿತ್ತು. ಈಗಲೂ ಅಂಥದ್ದೆ ಪ್ರಯತ್ನ ಮುಂದುವರೆದಿರುವುದು ಆಯವ್ಯಯದಲ್ಲಿ ಎದ್ದು ಕಾಣುತ್ತಿದೆ. ಪ್ರತಿಪಕ್ಷ ಶಾಸಕರಿದ್ದಾಗ್ಯೂ ಮಾಗಡಿ ಕ್ಷೇತ್ರದ ಎರಡು ಯೋಜನೆಗಳಿಗೆ ಅಸ್ತು ಎಂದ ಸಿದ್ದರಾಮಯ್ಯ ರಾಮನಗರ, ಕನಕಪುರ, ಚನ್ನಪಟ್ಟಣದ ಕಡೆ ಗಮನ ಹರಿಸಿಲ್ಲ. ಈ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಒಂದೇ ಒಂದು ಕಡೆಯೂ ಪ್ರಸ್ತಾಪಿಸಿಲ್ಲ.


ಜಿಲ್ಲೆಗೆ ಪ್ರತೀಕಾರದ ಫಲ...


ರಾಮನಗರ ಜಿಲ್ಲೆಯ ವಿಷಯದಲ್ಲಿ ಸಿದ್ದರಾಮಯ್ಯ ಬಿಜೆಪಿಗಿಂತಲೂ ಹೆಚ್ಚು ಪ್ರತೀಕಾರ ತೋರಿದ್ದಾರೆ. ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸುವ ಸರ್ವೇ ಕೆಲಸಕ್ಕೆ 5 ಕೋಟಿ ಮಂಜೂರಾತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುವೆ.
-ಎಚ್.ಸಿ.ಬಾಲಕೃಷ್ಣ,
 ಶಾಸಕ, ಮಾಗಡಿ.


ಶೋಷಿತರ ಹಿತಕ್ಕೆ ಒತ್ತು...

ಸಮತೋಲನದ ಬಜೆಟ್ ಇದು. ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರೈತರು, ಶೋಷಿತ ಸಮುದಾಯದ ಹಿತ ಚಿಂತನೆಗೆ ಒತ್ತು ನೀಡಿರುವುದು ಸ್ವಾಗತಾರ್ಹ.ಒಟ್ಟಿನಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ತೃಪ್ತಿಕರವಾಗಿದೆ.
-ಮರಿದೇವರು,
ಕಾಂಗ್ರೆಸ್ ಮುಖಂಡ.


ಫಲಾನುಭವಿಗಳಿಗೆ ಅನ್ಯಾಯ...


ಬಿಜೆಪಿ ಸರ್ಕಾರದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ, ಸುವರ್ಣ ಭೂಮಿ, ಭಾಗ್ಯಲಕ್ಷ್ಮಿ ಯೋಜನೆಗಳ ಮುಂದುವರಿಕೆಗೆ ನಿರಾಸಕ್ತಿ ತೋರಿದ್ದಾರೆ. ಈ ಮೂಲಕ ಒಟ್ಟಾರೆ ಎಲ್ಲಾ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅವರು ಸಾಮೂಹಿಕ ಅನ್ಯಾಯವೆಸಗಿದ್ದಾರೆ.
-ಶಿವಮಾದು,
ಜಿಲ್ಲಾಧ್ಯಕ್ಷ, ಬಿಜೆಪಿ


ಶಾಶ್ವತ ನೀರಾವರಿ ಬೇಕಿತ್ತು...

ಸಿದ್ದರಾಮಯ್ಯ ಅವರ ಆಯವ್ಯಯದಲ್ಲಿ ರಾಮನಗರ ಜಿಲ್ಲೆಗೆ ಗಮನಾರ್ಹ ಕೊಡುಗೆಗಳನ್ನೇ ನೀಡಿಲ್ಲ. ಈ ಜಿಲ್ಲೆಯ ಬಗ್ಗೆ ಬಿಜೆಪಿಯಂತೆ ಕಾಂಗ್ರೆಸ್ ಕೂಡ ಪ್ರತೀಕಾರಕ್ಕೆ ಇಳಿದಿದೆ. ಬರಪೀಡಿತ ರಾಮನಗರಕ್ಕೆ ಶಾಶ್ವತ ನೀರಾವರಿ ಬಗ್ಗೆ ಚಿಂತಿಸಬೇಕಿತು.
-ಪುಟ್ಟಸ್ವಾಮಯ್ಯ,
ಪ್ರಗತಿ ಪರ ರೈತ.


ಮಹಿಳೆಯರಿಗೆ ಒತ್ತು ನೀಡಿಲ್ಲ...
ಮಹಿಳಾ ಸಬಲೀಕರಣಕ್ಕೆ ಯಾವುದೇ ವಿಶೇಷ ಯೋಜನೆಗಳಿಲ್ಲದ ಬಜೆಟ್ ಇದು. ಭಾಗ್ಯಲಕ್ಷ್ಮಿ ಯೋಜನೆ ಸ್ಥಗಿತಗೊಳಿಸಿರುವುದೂ ಸರಿಯಲ್ಲ. ಶೂನ್ಯ ಬಡ್ಡಿಯಲ್ಲಿ 2 ಲಕ್ಷದವರೆಗೆ ಘೋಷಣೆಯಾಗಿದೆ.  
                                                                -ನಾಗರತ್ನ,
                                                  ಗೃಹಿಣಿ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.