ಬೆಂಗಳೂರು ಗ್ರಾಮಾಂತರ

'ಛಲವಾದಿಗಳ ಸಂಘಟನೆ ಅಗತ್ಯ'

Published On :

ರಾಮನಗರ: ಗ್ರಾಮೀಣ ಪ್ರದೇಶದ ಛಲವಾದಿ ಬಂಧುಗಳನ್ನು ಸಂಘಟಿಸುವ ಮೂಲಕ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದು ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಿ.ಕೃಷ್ಣಪ್ಪ ಕರೆ ನೀಡಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಛಲವಾದಿ ಮಹಾಸಭಾದ ತಾಲೂಕು ಶಾಖೆಗೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಹಕ್ಕಿನ ಮೂಲಕ ದಲಿತರಿಗೆ ಶಕ್ತಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಅಡಿಯಲ್ಲಿ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾ ಸಮಿತಿಯ ನಿಷ್ಕ್ರಿಯತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಮುಂದಿನ ಅಕ್ಟೋಬರ್ ಮಾಹೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಐತಿಹಾಸಿಕ ಛಲವಾದಿ ಸಮಾವೇಶಕ್ಕೆ ಇಂದಿನಿಂದಲೇ ಸಜ್ಜುಗೊಳ್ಳಬೇಕು ಎಂದರು.
ರಾಜ್ಯಮಟ್ಟದಲ್ಲಿ ಜನಾಂಗದ ಶಕ್ತಿ ಪ್ರದರ್ಶನಕ್ಕೆ ಕಾಲ ಪಕ್ವವಾಗಿರುವುದರಿಂದ ಛಲವಾದಿ ಬಂಧುಗಳು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಾಬಾ ಸಾಹೇಬರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಮುಖೇನ ಮಾದರಿ ಸಂಘಟನೆಯಯಾಗಿ ರೂಪಿಸಬೇಕು ಎಂದು ಕೃಷ್ಣಪ್ಪ ಮನವಿ ಮಾಡಿದರು.
ತಾಲೂಕು ಶಾಖೆಯ ನೂತನ ಅಧ್ಯಕ್ಷ ಎನ್.ಶ್ರೀಧರ್ ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಮನೆ ಮೆನೆಗೆ ತೆರಳಿ ಛಲವಾದಿ ಜನಾಂಗವನ್ನು ಗುರುತಿಸುವ ಅಭಿಯಾನಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.  ತಾಲೂಕು ಪದಾಧಿಕಾರಿಗಳಾಗಿ ನೇಮಕಗೊಂಡ ಶಿವಗಂಗಯ್ಯ, ಸಿದ್ದರಾಜು, ನಿಂಗಯ್ಯ, ಆರ್.ರಮೇಶ್, ಶಿವಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಪದಾಧಿಕಾರಿಗಳಾದ ಕೆ.ವೆಂಕಟೇಶ್, ಎಂ.ಶಿವಲಿಂಗಯ್ಯ, ಕೆ.ಚೌಡಯ್ಯ, ವೆಂಕಟೇಶ್, ಮಹದೇವಮ್ಮ, ಬಿ.ಸಿ.ರಮೇಶ್, ಶಿವಮೂರ್ತಿ, ದೇವರಾಜು, ಪ್ರಕಾಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.