ಸುದ್ದಿ ಸಂಕ್ಷೇಪ
ಅಧ್ಯಕ್ಷರಾಗಿ ವೈ.ಪಿ. ವಿಜಯಕುಮಾರ್ ಆಯ್ಕೆ
ದೇವನಹಳ್ಳಿ: ಇಲ್ಲಿನ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ಸಂಘದ 21 ನೆಯ ಮಹಾಸಭೆ ಸಂಘದ ಅಧ್ಯಕ್ಷರಾದ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಆಯೋಜಿಸಲಾಗಿತ್ತು. 2013-2015 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ವೈ.ಪಿ. ವಿಜಯಕುಮಾರ್ ಹಾಗೂ ಗೌ. ಕಾರ್ಯದರ್ಶಿಯಾಗಿ ಸಿ.ನಟರಾಜ್ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಪಿ.ರುದ್ರಪ್ಪ ಅಧಿಕೃತವಾಗಿ ಘೋಷಣೆ ಮಾಡಿದರಲ್ಲದೆ ನೂತನ ಕಾರ್ಯಕಾರಿ ಮಂಡಳಿಯವರನ್ನು ಅಭಿನಂದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಎಲ್ಲ ನಿರ್ದೇಶಕರು ಸಹಕರಿಸಬೇಕು ಎಂದರು. ಮಹಿಳಾ ಸ್ಥಾನಕ್ಕೆ ಅನ್ನಪೂರ್ಣಮ್ಮ ಹಾಗೂ ಮಂಗಳಮ್ಮ ಅಲ್ಲದೆ ಕಾರ್ಯಕಾರಿ ಸಮಿತಿಗೆ ಎಸ್.ವಿ.ದೇವರಾಜ್, ಎನ್.ಮಂಜುನಾಥ್, ಚಂದ್ರಮೌಳೀಶ್, ಬಿ.ವಿ.ನಾಗರಾಜು, ಎ.ಮಂಜುನಾಥ್, ಪುಟ್ಟರುದ್ರಪ್ಪ, ವೈ.ಪಿ.ಪ್ರವೀಣ್ಕುಮಾರ್, ಶಾ.ಪ್ರಸಾದ್, ಚಂದ್ರಶೇಖರ್, ಎಸ್.ಎಸ್.ಮಲ್ಲಿಕಾರ್ಜುನ್, ಪುನೀತ್, ಪಿ.ಜಯಪ್ರಕಾಶ್ ಹಾಗೂ ರಜನೀಕಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಹಾಸಭೆಯಲ್ಲಿ ಹಿರಿಯರಾದ ತುಪ್ಪದ ಸಿ.ಆರ್.ವೀರಭದ್ರಯ್ಯ, ಎ.ಸಿ.ಸಂಪನ್ನಪ್ಪ, ಇ.ಸಿ.ಚನ್ನಬಸವರಾಜು, ಸಿ.ಭಾಸ್ಕರ್ ಉಪಸ್ಥಿತರಿದ್ದು ಶ್ರೀ ನಗರೇಶ್ವರ ಸ್ವಾಮು ದೇವಾಲದ ಗರ್ಭಗುಡಿಯ ಮೇಲೆ ವಿಮಾನ ಗೋಪುರ ನಿರ್ಮಿಸಲು ಸಭೆ ಅನುಮೋದನೆ ನೀಡಿತು. ಕಾರ್ಯದರ್ಶಿ ಸಿ.ಬಸವರಾಜು ವರದಿ ನೀಡಿದರು.
ಪಠ್ಯೇತರ ಚಟುವಟಿಕೆಗೆ ಒತ್ತು ನೀಡಲಿ
ವಿಜಯಪುರ: ಗುರಿ ಹಿಂದೆ ಗುರು ಇರಬೇಕು ಎನ್ನುವಂತೆ ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ನಿಶ್ಚಿತ ಮನಸ್ಸಿದ್ದಲ್ಲಿ ಗುರುವಿನ ಮಾರ್ಗದರ್ಶನದೊಂದಿಗೆ ಗುರಿ ಮುಟ್ಟಬಹುದು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಚೌಡಪ್ಪ ತಿಳಿಸಿದರು. ಅವರು ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂದಿರದಲ್ಲಿ ಪ್ರಗತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಮತ್ತು ದ್ವಿತಿಯ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಿಕ್ಷಣದ ಅಭ್ಯಾಸದಲ್ಲಿರುವ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಕಡೆ ಗಮನವಿರಬೇಕು ಎಂದರು. ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಸತೀಶ್ ಕುಮಾರ್ ಮಾತನಾಡಿ, ಹಿಂದಿನ ಸಾಲಿನಂತೆ ಶೇ. 85 ಫಲಿತಾಂಶ ಗಳಿಸಿ ಉತೀರ್ಣರಾದ ಎಸ್ಎಸ್ಎಲ್ಸಿ ಮಕ್ಕಳಿಗೆ ಉಚಿತವಾಗಿ ದಾಖಲು ಪ್ರವೇಶ ನೀಡುವುದಾಗಿ ತಿಳಿಸಿದರು. ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಎನ್.ರಮೇಶ್ ಮಾತನಾಡಿದರು.
-----
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

