ಬೆಂಗಳೂರು ಗ್ರಾಮಾಂತರ

ಸಿದ್ದರಾಮಯ್ಯಗೆ ಅಭಿನಂದನೆ

Published On :

ಮಾಗಡಿ: ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಶ್ರೀರಂಗ ಯೋಜನೆಯ ಸಮಗ್ರ ಯೋಜನಾ ವರದಿ ತಯಾರಿಸಲು ಸರ್ಕಾರ 5 ಕೋಟಿ ಅನುದಾನವನ್ನು ಬಜೆಟ್ನಲ್ಲಿ ವೀಸಲಿಟ್ಟಿರುವುದಕ್ಕೆ ತಾಲೂಕಿನ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಶ್ವತ ನೀರಾವರಿ ಯೋಜನೆಯ ಹೋರಾಟ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ತಿಳಿಸಿದ್ದಾರೆ. ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ನಗರ ಪ್ರದೇಶ ಸುಧಾರಣ ಯೋಜನೆಯಡಿ (ಕೆ.ಎಂ.ಆರ್.ಪಿ) ವಿಶ್ವ ಬ್ಯಾಂಕ್ ಸಹಯೋಗದಲ್ಲಿ 72 ಕೋಟಿ ರುಗಳ ವೆಚ್ಚದಲ್ಲಿ  ದಿನದ  24 ಗಂಟೆಯೂ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು ಕೈಗೆತ್ತಿಕೊಂಡಿರುವ ಕ್ರಮ ಶ್ಲಾಘನೀಯವಾದುದು ಎಂದು ಎ.ಮಂಜು ತಿಳಿಸಿದರು. ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಮಹೇಶ್, ಕೆ.ವಿ. ಬಾಲು, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ, ನಯಾಜ್  ಅಹಮದ್, ಆಗಲಕೋಟೆ ಮೂತಿ, ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ರಹಮತ್  ಉಲ್ಲಾಖಾನ್, ಐಯ್ಯಂಡಳ್ಳಿ ರಂಗಸ್ವಾಮಿ, ಕುದೂರು ಪುರುಷೋತ್ತಮ್, ಚಂದ್ರಯ್ಯ ಇದ್ದರು.
ಕಲಾವಿದರ ಕೊಡುಗೆ ಅಮೂಲ್ಯ: ಶ್ರೀ
ನೆಲಮಂಗಲ: ಗ್ರಾಮೀಣ ಪ್ರದೇಶದಲ್ಲಿನ ಕಲೆಯನ್ನು ಜೀವಂತವಾಗಿ ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಗ್ರಾಮೀಣ ಕಲಾವಿದರ ಕೊಡುಗೆ ಅಮೂಲ್ಯವಾದದ್ದು ಎಂದು ಶ್ರೀ ಕಂಚುಗಲ್  ಬಂಡೆಮಠದ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ದಾಬಸ್ಪೇಟೆಯಲ್ಲಿ ನಡೆದ ರತಿ ಕಲ್ಯಾಣ ಪೌರಾಣಿಕ ನಾಟಕದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ ಪೌರಾಣಿಕ ನಾಟಕಗಳು ಜನರಿಗೆ ಹತ್ತಿರವಾಗಿವೆ. ಇಲ್ಲಿನ ಪ್ರಸಂಗಗಳನ್ನು  ಜೀವನದಲ್ಲಿ ಅಳವಡಿಸಿಕೊಂಡು ಧರ್ಮದಿಂದ ನಡೆಯುತ್ತಿರುವ  ಬಂಧುಗಳು ಇಂದಿಗೂ ಸಮಾಜದಲ್ಲಿದ್ದಾರೆ ಎಂದರು. ವನಕಲ್ಲು ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ ಮಾತನಾಡುತ್ತಾ ಇಂದಿಗೂ ಪೌರಾಣಿಕ ನಾಟಕಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ನಾಟಕ ಆಡುವುದರಿಂದ ಜನರಿಗೆ ಮನರಂಜನೆ ಸಿಗುವುದಲ್ಲದೆ  ಸೌಹಾರ್ದ ಜೀವನ ನಡೆಸಲು ಅನುಕೂಲವಾಗುತ್ತಿದೆ ಎಂದರು.
 ಆರ್.ಟಿ.ಓ ಇಲಾಖೆಯ ನಾಗೇಶ್ ಕುಮಾರ್, ಸೋಂಪುರ ತಾ.ಪಂ.ಸದಸ್ಯ ವೀರಯ್ಯ, ಉಪಾಧ್ಯಕ್ಷ ಹೊನ್ನಗಂಗಶೆಟ್ಟಿ, ಕಲಾವಿದ ಎನ್.ಪಿ.ಗೋಪಿನಾಥ್, ವ್ಯವಸ್ಥಾಪಕ ರಾಜಶೇಖರಯ್ಯ, ಗ್ರಾ.ಪಂ. ಮರಿಯಪ್ಪ, ಕೆಂಪಣ್ಣ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.