ಯುವ ಮುನ್ನಡೆ ಸ್ನೇಹಕೂಟ
ದೊಡ್ಡಬಳ್ಳಾಪುರ: ಅರಿವು ಮತ್ತು ಪರ್ಯಾಯ ಜೀವನ ಕೌಶಲ್ಯಗಳ ತರಬೇತಿ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಯಾದ ಸಂವಾದ ದೊಡ್ಡಬಳ್ಳಾಪುರ ಯುವಜನ ಸಂಪನ್ಮೂಲ ಕೇಂದ್ರದ ಈಗಿನ ಸ್ವರೂಪದ ಕಾರ್ಯಕ್ರಮಗಳನ್ನು ಅಂತ್ಯಗೊಳಿಸುತ್ತಿದೆ. ಮುಂದಿನ ನಡೆ ಹಂಚಿಕೊಳ್ಳಲು ಸಂವಾದ ಯುವ ಮುನ್ನಡೆ ಸ್ನೇಹಕೂಟ ಆಯೋಜಿಸಲಾಗಿದೆ. ಕಾರ್ಯಕ್ರಮ ಜು. 28ರ ಭಾನುವಾರ ಇಲ್ಲಿನ ಬೆಸೆಂಟ್ ಪಾರ್ಕ್ನಲ್ಲಿ ನಡೆಯಲಿದೆ. ಕಳೆದ 20 ವರ್ಷಗಳಲ್ಲಿ ಸಂವಾದದ ಜೊತೆಗೆ ಒಡನಾಡಿದ ದೊಡ್ಡಬಳ್ಳಾಪುರ ವಿಭಾಗದ ಒಡನಾಡಿಗಳು ಎಲ್ಲೇ ಇದ್ದರೂ ಸಂವಾದವನ್ನು ಸಂಪರ್ಕಿಸುವಂತೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ವಿವರಗಳಿಗೆ 080-27626450 ಅಥವಾ ಮೊ. 9611562812 ಸಂಪರ್ಕಿಸಬಹುದು.
ನೆಮ್ಮದಿಗೆ ಧಾರ್ಮಿಕ ಕಾರ್ಯ ಸಹಕಾರಿ
ಸೂಲಿಬೆಲೆ: ಧಾರ್ಮಿಕ ಕಾರ್ಯಗಳು ಮನುಷ್ಯನ ಮಾನಸಿಕ ನೆಮ್ಮದಿಗೆ ಮಾರ್ಗವಾಗಲಿದ್ದು, ಪ್ರತಿಯೊಬ್ಬರು ದೇವರ ಧ್ಯಾನದತ್ತ ಆಸಕ್ತಿ ವಹಿಸಿ ಸಂತೃಪ್ತಿಯ ದಾರಿ ಕಂಡುಕೊಳ್ಳಬೇಕು ಎಂದು ಅಭಯ ಶನಿ ಮಹಾತ್ಮ ದೇವಸ್ಥಾನ ಮಂಡಳಿಯ ಸಂಸ್ಥಾಪಕ ವೇದ ಬ್ರಹ್ಮಶ್ರೀ ಡಿ.ಎಲ್. ವೀರ ಬ್ರಹ್ಮಚಾರಿ ಹೇಳಿದರು. ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸತ್ಯ ನಾರಾಯಣಸ್ವಾಮಿ ದೇಗುಲದಲ್ಲಿ ಹಮ್ಮಿಕೊಂಡಿದ್ದ 6ನೇ ವಾರ್ಷಿಕೋತ್ಸವದ ಲೋಕ ಕಲ್ಯಾಣಾರ್ಥ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬೆಳ್ಳಾವಿ ಮಠದ ಮಹಾಂತೇಶ ಸ್ವಾಮೀಜಿ ಮಾತನಾಡಿ, ಮನುಷ್ಯ ಸ್ವಾರ್ಥ ಬದಿಗೊತ್ತಿ ದೇವರ ನಾಮಸ್ಮರಣಿಗೆ ಒತ್ತು ನೀಡುವುದರಿಂದ ಕಷ್ಟಗಳ ಸರಮಾಲೆ ಕಳೆಯಲಿದೆ. ಪ್ರತಿ ವೃತ್ತಿಗೆ ನಂಬಿಕೆ ಮುಖ್ಯ. ಧಾರ್ಮಿಕ ಕಾರ್ಯಗಳ ಮನುಷ್ಯನ ಒತ್ತಡ ನಿವಾರಣೆ ಮಾಡಲು ಸಹಾಯಕವಾಗಲಿವೆ ಎಂದರು. ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲ್ಲಿನ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಬಾಬಾ ಮಂದಿರದಲ್ಲಿ ವಿಶೇಷ ಪೂಜೆ
ಸೂಲಿಬೆಲೆ: ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೂಲಿಬೆಲೆ ಮಧ್ಯ ಭಾಗದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಗುರು ಪೂರ್ಣಮೆ ಅಂಗವಾಗಿ ನಾನಾ ಪೂಜಾ ಕಾರ್ಯಕ್ರಮ ನಡೆಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಹೋಮ, ಹವನ, ಬಾಬಾ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸೂಲಿಬೆಲೆ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಗಳ ಭಕ್ತರು ಬಾಬಾ ದರ್ಶನ ಪಡೆದರು.
26ರಂದು ಲಲಿತಾ ಲಕ್ಷಾರ್ಚನೆ
ದೊಡ್ಡಬಳ್ಳಾಪುರ: ಇಲ್ಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಚೌಡೇಶ್ವರಿ ಮಹಿಳಾ ಸಂಘ ಜು.26ರಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಬೆಳಗ್ಗೆ 9.30ರಿಂದ ಪೂಜಾ ಕಾರ್ಯಕ್ರಮ, ಲಕ್ಷಾರ್ಚನೆ ಆರಂಭಗೊಳ್ಳಲಿದೆ. ಸುಮಂಗಲಿಯರಿಂದ ನೆರವೇರುವ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಭಾಗವಹಿಸಬೇಕೆಂದು ಮಹಿಳಾ ಸಂಘ ಕೋರಿದೆ. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ನೆರವೇರಲಿದ್ದು, ಸಂಜೆ 7 ಗಂಟೆಗೆ ಚೌಡೇಶ್ವರಿ ಅಮ್ಮನವರಿಗೆ ಉಯ್ಯಾಲೋತ್ಸವ ನೆರವೇರಲಿದೆ.
ನೌಕರರ ಸಂಘಕ್ಕೆ ಆಯ್ಕೆ
ಹೊಸಕೋಟೆ: ತಾಲೂಕಿನ ಸರಕಾರಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 32 ಸ್ಥಾನಗಳಲ್ಲಿ 29 ಅವಿರೋಧ ಆಯ್ಕೆಯಾಗಿದ್ದು, ಶಿಕ್ಷಣ ಇಲಾಖೆಯ 3 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅವಿರೋಧ ಆಯ್ಕೆಯಾದವರು: ಸಿ.ಎ. ಸಿಕಂದರ್(ಕೃಷಿ), ಡಾ. ಸಿ.ಎನ್. ನಾರಾಯಣಸ್ವಾಮಿ (ಪಶು ಸಂಗೋಪನೆ), ಎಂ.ಆರ್.ಆರ್. ಆರಾಧ್ಯ(ವಾಣಿಜ್ಯ, ಮೀನುಗಾರಿಕೆ) ವೀಣಾ ಕುಲಕರ್ಣಿ(ಸಾಂಖ್ಯಿಕ) ಕೆ.ವಿ ಶ್ರೀನಿವಾಸಮೂರ್ತಿ, ಸಿ.ವೈ.ಕುಮಾರ್(ಕಂದಾಯ), ಗೋವಿಂದಪ್ಪ, ಡಿ.ವಿ.ನಾರಾಯಣರೆಡ್ಡಿ(ಲೋಕೋಪಯೋಗಿ), ಕೆ.ಟಿ. ಹಾಲಸ್ವಾಮಿ (ಪ್ರೌಡಶಾಲೆ), ಜಯ ಲಕ್ಷ್ಮಮ್ಮ(ಕಿರಿಯ ಕಾಲೇಜು), ಜಿ. ಸುಬ್ರಮಣಿ (ಸಮಾಜ ಕಲ್ಯಾಣ), ಪುಷ್ಪಾ(ಅರಣ್ಯ), ಎ.ಆಂಜಿನೇಯ ಸ್ವಾಮಿ(ಅಬಕಾರಿ), ಕೆ.ಎಚ್. ಮುನೇಗೌಡ(ಕೈಗಾರಿಕೆ), ಎಚ್. ಗೋವಿಂದರಾಜು, ಸಿ.ಕೃಷ್ಣ ಮೂರ್ತಿ, ಎಂ. ನರೇಶ್, ರುಕ್ಮಿಣಿಯಮ್ಮ(ಆರೋಗ್ಯ), ಮುನಿಸ್ವಾಮಿಗೌಡ (ರೇಷ್ಮೆ) ಬಸ್ತಾರ್ ಖಾನ್(ಖಜಾಂಚಿ) ಬಸವರಾಜು(ಭೂ ಮಾಪನ) ಕೃಷ್ಣಮೂರ್ತಿ(ಇಎಸ್ಐ), ಭಾರತಿ(ಸಿಡಿಪಿಓ) ಮುನಿರಾಜು(ಜಲಾನಯನ) ನಾರಾಯಣಸ್ವಾಮಿ(ಸಣ್ಣ ಕೈಗಾರಿಕೆ), ಶಿವಣ್ಣ(ತಾಪಂ), ಚಂದ್ರ ಕಲಾ (ನ್ಯಾಯಾಂಗ), ಕಮಲಮ್ಮ (ಸಹಕಾರ).
ಚುನಾವಣೆಯಲ್ಲಿ ಆಯ್ಕೆಯಾದವರು: ಅಲ್ಲಾಭಕ್ಷಾ, ಅರ್.ಮುನಿಶಾಮಪ್ಪ, ಜಿ. ಕೊಂಡಪ್ಪ (ಶಿಕ್ಷಣ ಇಲಾಖೆ).
ನಿರ್ದೇಶಕರ ನೇಮಕ
ನೆಲಮಂಗಲ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ಸರ್ಕಾರಿ ನೌಕರರ ಸಂಘದ 5 ಸ್ಥಾನಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಗಿರೀಶ್ ತಂಡದ 4 ಮಂದಿ ಆಯ್ಕೆಯಾದರು. ಮಾಚನಹಳ್ಳಿ ಶಾಲೆಯ ವಾಸುದೇವಮೂರ್ತಿ, ಹೊನ್ನೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಪುಟ್ಟರುದ್ರಾರಾದ್ಯ, ಇಸುವನಹಳ್ಳಿ ಶಾಲೆಯ ಗಿರೀಶ್, ಗೋರಿನಬೆಲೆ ಶಾಲೆಯ ಶಿಕ್ಷಕ ಕೆ.ಎನ್. ಗಣೇಶ್ ಮತ್ತು ತ್ಯಾಮಗೊಂಡ್ಲು ಶಾಲೆಯ ಶಿವಕುಮಾರ್ ಆಯ್ಕೆಯಾದರು.
ಅಭಿನಂದನೆ: ಎಲ್ಲಾ ಶಿಕ್ಷಕರಿಗೂ ತಂಡದಿಂದ ಆಯ್ಕೆಯಾದ ಗಿರೀಶ್, ಪುಟ್ಟರುದ್ರಾರಾದ್ಯ, ವಾಸುದೇವಮೂರ್ತಿ, ನಾಗೇಶ್ ಮತ್ತು ಮುಖಂಡರಾದ ಹೊನ್ನಶಾಮಯ್ಯ, ಕೃಷ್ಣಮೂರ್ತಿ, ತಿಮ್ಮೇಗೌಡ, ಮಲ್ಲೇಶಯ್ಯ, ಯೋಗಾನಂದ ಮತ್ತು ಪರಾಜಿತ ಅಭ್ಯರ್ಥಿ ದೇವರಾಜು ಶಿಕ್ಷಕರನ್ನು ಅಭಿನಂದಿಸಿದ್ದಾರೆ.
ಅಣ್ಣೇಗೌಡ ಆಯ್ಕೆ
ಮಾಗಡಿ: ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರಾಗಿ ಆರೋಗ್ಯ ಇಲಾಖೆಯಿಂದ ಅಣ್ಣೇಗೌಡ, ಉಮೇಶ್, ಎನ್.ಟಿ. ನಾಗರಾಜು, ಎಂ.ಜಿ. ರಘುನಂದನ್, ಎನ್. ಶಿವಸ್ವಾಮಿ ಹಾಗೂ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಿಂದ ಎಸ್.ಪಿ. ಉಮೇಶ್, ಕೃಷ್ಣಪ್ಪ, ಎಚ್.ಪಿ. ನಾಗೇಶ್, ಎಸ್. ಪರಮೇಶಯ್ಯ, ಬಿ. ರವಿಕುಮಾರ್, ಎಚ್.ಆರ್. ರಾಮಕೃಷ್ಣಯ್ಯ, ಎಂ.ಸಿ. ರಂಗಸ್ವಾಮಿ, ಪ್ರೌಢ ಶಾಲೆಯಿಂದ ಮೂರ್ತಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

