ಲೋಕಾ ದಾಳಿ: ಬರಿಗೈಲಿ ವಾಪಸ್
ಮಾಗಡಿ: ಬಾಲಾಜಿ ಚಿತ್ರ ಮಂದಿರದ ಬಳಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಮನೆಯ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ ನಡೆಸಿ, ಹಣ, ದಾಖಲೆ ಪತ್ರಗಳು ಏನೂ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರಿಗಿದ ಪ್ರಸಂಗ ಗುರುವಾರ ಮಾಗಡಿಯಲ್ಲಿ ನಡೆದದೆ.
ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಆರೋಪಿ ಗುತ್ತಿಗೆದಾರ ಕೆಂಪರಾಜು ಮತ್ತು ನಂಜಪ್ಪ, ಶಂಕರ್ ಸಹಚರರರು ಎನ್ನಲಾದ ಈರಣ್ಣ ಎಂಬುವರ ಮನೆಯ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಸೈಯದ್ ನಿಜಾಮುದ್ದೀನ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಪ್ರದೀಪ್,ಪಿ.ಕೆ. ರಾಜು, ಆರ್.ಪಿ. ಅನಿಲ್ ಇತರೆ ಹತ್ತು ಮಂದಿ ಸಿಬ್ಬಂದಿಗಳೊಂದಿಗೆ ದಿಢೀರ್ ದಾಳಿ ನಡೆಸಿದರು. ದಾಳಿ ವೇಳೆ ಯಾವುದೇ ಪ್ರಮುಖ ದಾಖಲೆಗಳಾಗಲಿ, ಹಣವಾಗಲಿ ದೊರಕಿಲ್ಲ ಎಂದು ಲೋಕಾಯುಕ್ತ ಪ್ರದೀಪ್ ತಿಳಿಸಿದರು.
ದಾಳಿಗೆ ಲೋಕಾಯುಕ್ತರು ಆಗಮಿಸಿದ್ದಾಗ ಈರಣ್ಣ ಅವರು ಮನೆಯಲ್ಲಿರಲಿಲ್ಲ. ಮನೆಗೆ ಬೀಗ ಹಾಕಿಕೊಂಡು ಪತ್ನಿಯ ತವರೂರಿನಲ್ಲಿ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ತೆರಳಿದ್ದರು. ಮನೆಗೆ ಬೀಗಿ ಹಾಕಿದ್ದರಿಂದ ಲೋಕಾಯುಕ್ತ ಡಿವೈಎಸ್ಪಿ ಸೈಯದ್ ನಿಜಾಮುದ್ದೀನ್ ಅವರು, ಬೀಗ ರಿಪೇರಿ ಮಾಡುವ ಕೆಲಸಗಾರರನ್ನು ಕರೆಸಿ ಬೀಗ ತೆಗೆಸಿ ಕಾರ್ಯಾಚರಣೆ ನಡೆಸಿದರು. ಆದರೂ ಯಾವುದೇ ದಾಖಲೆ ಪತ್ರಗಳಾಗಲಿ, ಹಣವಾಗಲಿ ಸಿಕ್ಕಿಲ್ಲ.
ಸದಾಶಿವರೆಡ್ಡಿಗೆ ಜಾಮೀನು
ಮಾಗಡಿಯಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು 15 ಮಂದಿಯನ್ನು ಆರೋಪಿಗಳನ್ನಾಗಿಸಿ ಸತ್ರ ನ್ಯಾಯಾಲಯಕ್ಕೆದೋಷಾರೋಪ ಪಟ್ಟಿ ಸಲ್ಲಿಸಿದ್ದು ಈ ಸಂಬಂಧ ಆರೋಪಿಗಳು ಸತ್ರ ನ್ಯಾಯಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ಸದಾಶಿವರೆಡ್ಡಿ ಪಾಟೀಲ್ ಮತ್ತು ಸಹಾಯಕ ಲೆಕ್ಕಪರೀಶೋಧಕರಾಗಿದ್ದ ಗೋವಿಂದರಾಜು ಅವರಿಗೆ ಸತ್ರ ನ್ಯಾಯಾಲಯವು ಜಾಮೀನು ನೀಡಿದ್ದು, ಉಳಿದ 13 ಮಂದಿಯ ಜಾಮೀನಿನ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಲ್ಲಿ ಎಂಜಿನಿಯರ್ ಚಂದ್ರಶೇಖರ್ ಎಂಬುವವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಲೋಕಾಯುಕ್ತ ಡಿವೈಎಸ್ಪಿ ಸೈಯದ್ ನಿಜಾಮುದ್ದೀನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

