ಬಿಪಿಎಲ್ ಕಾರ್ಡ್ಗೆ ಪರದಾಟ
ನೆಲಮಂಗಲ: ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಜನರು ಮತ್ತು ಕೂಲಿ ಕಾರ್ಮಿಕರು ತಮ್ಮ ಕಾರ್ಡ್ಗಳನ್ನು ಗ್ರಾಮ ಪಂಚಾಯ್ತಿಗಳಲ್ಲಿ ನವೀಕರಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಬಿಪಿಎಲ್ ಪಡಿತರ ಚೀಟಿದಾರರಿಗೆ ಜುಲೈ ತಿಂಗಳಿನಿಂದ 1 ರು.ಗೆ 1 ಕೆ.ಜಿ ಅಕ್ಕಿ ನೀಡುವುದಾಗಿ ತಿಳಿಸಿರುವುದು ಒಂದೆಡೆ ಸಂತೋಷ ಉಂಟುಮಾಡಿದರೆ ತಮ್ಮಲ್ಲಿಯ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಜೂನ್ ತಿಂಗಳ ಅಂತ್ಯದೊಳಗಾಗಿ ಸ್ಥಳೀಯ ಗ್ರಾಮ ಪಂಚಾಯ್ತಿಗಳಲ್ಲಿ ನವೀಕರಿಸಿಕೊಳ್ಳಬೇಕು. ಕಾರಣ ಜುಲೈ ತಿಂಗಳಿನಿಂದ ಈ ಬಿ.ಪಿ.ಎಲ್.ಕಾರ್ಡ್ದಾರರಿಗೆ 1 ರು.ಗೆ 1 ಕೆ.ಜಿಯಂತೆ ಒಟ್ಟು ಮೂವತ್ತು ಕೆ.ಜಿ ಅಕ್ಕಿ ಪಡೆಯಬಹುದು. ಅದಕ್ಕಾಗಿ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಕೇಳುತ್ತಿರುವ ದಾಖಲೆಗಳನ್ನು ಒದಗಿಸಿಕೊಳ್ಳುವಲ್ಲಿ ಜನ ಪರದಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿಗೆ ರೈತರಿಂದ ಬರಬೇಕಾದ ಮನೆ ಕಂದಾಯ, ನೀರಿನ ಬಿಲ್ ಸೇರಿದಂತೆ ಜಮೀನಿನ ಕಂದಾಯವನ್ನು ಸಂಪೂರ್ಣ ಕಟ್ಟಿರಬೇಕು. ಈ ರೀತಿ ಎಲ್ಲಾ ದಾಖಲೆಗಳನ್ನು ಹೊಂದಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಈಗ ಬಿತ್ತನೆ ಸಮಯವಾಗಿರುವುದರಿಂದ ರೈತರು ಜಮೀನಿನಲ್ಲಿನ ಕೆಲಸ ಕಾರ್ಯಕ್ಕೆ ಹೋಗಬೇಕಾಗಿದೆ ಮತ್ತು ತಾನು ಕಟ್ಟಬೇಕಾದ ಕಂದಾಯವನ್ನು ಕಟ್ಟಲು ಕೆಲವರಿಗೆ ಶಕ್ತಿಯಿಲ್ಲ. ಸರ್ಕಾರ ಒಂದು ರು.ಗೆ ಒಂದು ಕೆ.ಜಿ ಅಕ್ಕಿ ನೀಡಲು ಇಷ್ಟೆಲ್ಲಾ ದಾಖಲೆಗಳನ್ನು ಕೇಳುತ್ತಿದೆ.
ದೂರದ ಗ್ರಾಮಗಳಿಂದ ಜನ ಬೆಳಗಿನ ಎಂಟು ಗಂಟೆಗಾಗಲೆ ಗ್ರಾಮ ಪಂಚಾಯ್ತಿ ಕಚೇರಿಯ ಬಾಗಿಲಲ್ಲಿ ನಿಂತು ಕಾರ್ಡ್ ನವೀಕರಿಸಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳನ್ನು ಕಾಯುವ ಕೆಲಸ ಮಾಡಬೇಕಾಗಿ ಬಂದಿದೆ. ಇಲ್ಲಿಯೂ ಹೆಚ್ಚಿನ ಜನಸಂದಣಿ ಇರುವುದರಿಂದ ಮತ್ತು ಪಂಚಾಯ್ತಿಯಲ್ಲಿನ ಕಂಪ್ಯೂಟರ್ ಕೆಲಸ ಮಾಡಲು ವಿದ್ಯುತ್ ಅಭಾವ ಇರುತ್ತದೆ. ಇನ್ನು ವಿದ್ಯುತ್ ಬರುವವರೆಗೂ ಕಾಯಬೇಕು.
ಕರೆಂಟ್ ಬಂದರೂ ಇಂಟರ್ನೆಟ್ ಸೌಲಭ್ಯ ಸರಿ ಇಲ್ಲದ ಕಾರಣ ಒಂದು ಪಡಿತರ ಚೀಟಿಯನ್ನು ನವೀಕರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸಾಲಿನಲ್ಲಿ ನಿಂತಿರುವ ಜನರ ತಾಳ್ಮೆ ಸಹನೆಯ ಕಟ್ಟೆ ಒಡೆದು ಕೆಲವು ಸಂದರ್ಭದಲ್ಲಿ ಪಂಚಾಯ್ತಿ ಅಧಿಕಾರಿಗಳು ಮತ್ತು ಜನರ ನಡುವೆ ಸಂಘರ್ಷ ನಡೆದ ಘಟನೆಗಳು ನಡೆಯುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

