ಬೆಂಗಳೂರು ಗ್ರಾಮಾಂತರ

ನೆಲಮಂಗಲ ಪುರಸಭೆ ಶೇ. 75

Published On :

ನೆಲಮಂಗಲ: ಪುರಸಭೆಯ ಒಟ್ಟು 23 ಸದಸ್ಯರ ಆಯ್ಕೆಗಾಗಿ  ಎಲ್ಲಾ ವಾರ್ಡ್‌ಗಳಿಂದಲೂ 129 ಅಭ್ಯರ್ಥಿಗಳು ಕಣದಲ್ಲಿದ್ದು, 23 ವಾರ್ಡ್‌ಗಳಿಂದಲೂ ಒಟ್ಟು 24,999 ಮತದಾರರ ಪೈಕಿ 18,708 ಮಂದಿ ಮತ ಚಲಾಯಿಸಿದ್ದಾರೆ. ಇವರ ಪೈಕಿ 9518 ಮಹಿಳೆಯರು ಮತ್ತು 9190 ಪುರುಷ ಮತದಾರರು ಮತ ಚಲಾಯಿಸಿದ್ದು ಸುಮಾರು ಶೇ.75 ರಷ್ಟು ಮತದಾನವಾಗಿದೆ. ಅತೀ ಹೆಚ್ಚು ಮತದಾನವಾದ ವಾರ್ಡ್ ನಂ.2 ರಾಯನ್ ನಗರ ಪ.ಜಾತಿ ಮೀಸಲು ಕ್ಷೇತ್ರ ಶೇ.92. 1144 ಮತದಾರರ ಪೈಕಿ 1062 ಮಂದಿ ಮತದಾನ ಮಾಡಿದ್ದಾರೆ. ಅತೀ ಕಡಿಮೆ ಮತದಾನವಾದ ವಾರ್ಡ್ ನಂ. 15 ಬ್ಯಾಂಕ್ ಕಾಲೋನಿ ಹಿಂ.ವರ್ಗ(ಎ) ಮೀಸಲು ಕ್ಷೇತ್ರದಲ್ಲಿ ಶೇ.62.2 ರಷ್ಟು 761 ಮತದಾರರಲ್ಲಿ 472 ಮಂದಿ ಮತ ಚಲಾಯಿಸಿದ್ದಾರೆ. ವಾರ್ಡ್ ನಂ.21 ವಿಜಯನಗರ (ಸಾಮಾನ್ಯ ಮಹಿಳೆ ಮೀಸಲು) ಕ್ಷೇತ್ರದಲ್ಲಿ ನಕಲಿ ಮತದಾನ ಮುಂದಾದಾಗ ಸಣಪುಟ್ಟ ಘಟನೆ ಹೊರತು ಪಡಿಸಿದರೆ ಎಲ್ಲಿಯೂ ಸಹ ಯಾವುದೇ ಅಹಿತಕರ ಘಟನೆ ನಡೆಯದೆ ಬಾರಿ ಬಂದೋಬಸ್ತ್‌ನಿಂದಾಗಿ ಅತ್ಯಂತ ಶಾಂತಿಯುತವಾಗಿ ನಡೆಯಿತು.  ವಾಡ್ ನಂ. 9 ಕುರುಬರ ಬೀದಿಯಲ್ಲಿ ನೂರು ವರ್ಷ ದಾಟಿದ ಮಹಿಳೆ ಗಂಗಮ್ಮ ಮತದಾನ ಮಾಡಿದರು. ವಿಕಲಚೇತನರನ್ನು ವಾಹನಗಳಲ್ಲಿ ಕರೆ ತಂದು ಮತದಾನ ಮಾಡಲು ಅವರ ನಿಕಟವರ್ತಿಗಳು ಮತದಾನಕ್ಕೆ ಸಹಾಯ ಮಾಡುತ್ತಿದ್ದರು. ಮಾಚಿ ಸಚಿವ ಆಂಜನಮೂರ್ತಿ ಇಂದಿರಾನಗರದ ವಾರ್ಡ್‌ನಲ್ಲಿ ಮತದಾನ ಮಾಡಿದರು.
ಓಡಿದ ನಕಲಿ ಮತದಾರರು: ನಕಲಿ ಮತದಾನ ಮಾಡಲು ಮುಂದಾದ ಇಬ್ಬರಿಗೆ  ಪೊಲೀಸರು ರುಚಿ ತೋರಿಸುತ್ತಲೆ ಸ್ಥಳದಿಂದ ಕಾಲ್ಕಿತ್ತು ಓಡಿದರು. ಹಾಲಿ ಬಿ.ಜೆ.ಪಿ.ಶಾಸಕ ಎಂ.ವಿ.ನಾಗರಾಜು ಅವರ ಮತ ನೆಲಮಂಗಲದಲ್ಲಿ ಇಲ್ಲದ ಪ್ರಯುಕ್ತ ಶಾಸಕರು ಮತದಾನ ಮಾಡಲಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.