ಮಾಜಿ ಸಚಿವ ಸಿಂಧ್ಯಾ ಪ್ರಚಾರ
ಕನಕಪುರ: ಮಾಜಿ ಸಚಿವ, ಜೆಡಿಎಸ್ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಕನಕಪುರ ಪಟ್ಟಣದ ಪೇಟೆಬೀದಿ, ಮುಸ್ಲೀಂ ಬ್ಲಾಕ್, ಮೆಳೇಕೋಟೆ, ಮೇಗಳಬೀದಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಜೆಡಿಎಸ್ಮುಖಂಡರುಗಳಾದ ಬಿಎಸ್ಗೌಡ,ಅಬ್ದುಲ್ ವಾಜೀದ್, ಸರ್ದಾರ್,ಚಂದ್ರು,ಬಿ.ನಾಗರಾಜು,ಪುಟ್ಟರಾಜು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಸಿಂಧ್ಯಾ ಮಾತನಾಡುತ್ತಾ, ಕ್ಷೇತ್ರದ ಪರಿಸರವನ್ನು ಹಾಳುಗೆಡವಿ ಹಣಮಾಡಿರುವ ಶಾಸಕ ಶಿವಕುಮಾರ್ ಕನಕಕಪುರ ತಾಲೂಕಿನಲ್ಲಿ ದರ್ಪ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಪಾವತಿ ಜನರ ಪರದಾಟ
ವಿಜಯಪುರ: ಪುರಸಭೆ, ನಾಡಕಚೇರಿ ಹಾಗೂ ಕಂದಾಯ ಇಲಾಖೆಗಳ ಬಹುತೇಕ ಅಧಿಕಾರಿಗಳನ್ನು ಚುನಾವಣೆ ಕಾರ್ಯನಿಮಿತ್ತ ನೇಮಿಸಿರುವ ಕಾರಣ ಕಚೇರಿಯಲ್ಲಿ ಅಧಿಕಾರಿಗಳಿಲ್ಲದೆ ಸ್ಥಗಿತಗೊಂಡಿದೆ. ಕಂದಾಯ ಪಾವತಿಸಲು ಏ.30 ಕೊನೆಯ ದಿನವಾಗಿದ್ದು 15 ದಿನಗಳಿಂದ ಅಲೆದರೂ ನಮ್ಮ ಕೆಲಸವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ರಾಜ್ಯದೆಲ್ಲೆಡೆ ಪುರಸಭೆಗಳ ಹಾಗೂ ನಗರ ಸಭೆಗಳ ಕಂದಾಯಗಳನ್ನು ಪಾವತಿಸಲು ಏ.30 ಕೊನೆಯ ದಿನವಾಗಿದ್ದು,ಇಲ್ಲಿನ ಪುರಸಭೆ ಕಚೇರಿಯಲ್ಲಿ ಕಂದಾಯ ಪಾವತಿಸಲು ಆಗಮಿಸುವ ನೂರಾರು ಮಂದಿ ಸಾರ್ವಜನಿಕರು ಸಿಬ್ಬಂದಿಗಳಾದರೂ ಕೈಗೆ ದೊರೆಯದೇ ಪದೇ ಪದೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಅಥವಾ ಕಂದಾಯ ವಿಸ್ತರಣೆ ಮಾಡಿರುವ ಬಗ್ಗೆ ಸೂಚನೆಗಳಿದ್ದರೆ ತಕ್ಷಣ ತಿಳಿಯಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಂದು ಎಚ್ಡಿಕೆ ರೋಡ್ ಶೋ
ಮಾಗಡಿ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಬೃಹತ್ ರೋಡ್ ಶೋ ಮೇ.2 ರಂದು ಮಾಗಡಿ ತಾಲೂಕಿನಲ್ಲಿ ಏರ್ಪಡಿಸಿರುವುದಾಗಿ ಜೆಡಿಎಸ್ ಅಧ್ಯಕ್ಷ ಪೋಲೀಸ್ ರಾಮಣ್ಣ ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕುದೂರು, ಮಾಗಡಿಯಲ್ಲಿ 1 ಗಂಟೆಗೆ ಹಾಗೂ ಬಿಡದಿಯಲ್ಲಿ 2.30ಕ್ಕೆ ಕುಮಾರಸ್ವಾಮಿ ಅವರು ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಅವರ ಪರ ಮತಯಾಚಿಸಲಿದ್ದಾರೆ.
ಜೆಡಿಎಸ್ಗೆ ಸೇರ್ಪಡೆ
ಕನಕಪುರ: ಕಳೆದ ಎರಡೂವರೆ ದಶಕಗಳಿಂದ ಶಾಸಕ ಡಿ.ಕೆ.ಶಿವಕುಮಾರ್ ಆತ್ಮೀಯ ವಲಯದಲ್ಲಿದ್ದ ಬೆಂ.ಗ್ರಾ ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ತಾಪಂ ಸದಸ್ಯ ಹಲಸೂರು ಸಿದ್ಧರಾಜು ಇತ್ತೀಚೆಗೆ ಕಾಂಗ್ರೆಸ್ ಸಭೆಗಳಲ್ಲಿ ನಡೆದ ತೇಜೋವಧೆಯಿಂದ ನೊಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜನತಾದಳಕ್ಕೆ ಸೇರ್ಪಡೆ ಗೊಂಡಿದ್ದಾರೆ. ಪಿಜಿಆರ್ ಸಿಂಧ್ಯಾ ಸಿದ್ಧರಾಜುರವರನ್ನು ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಸಿದ್ಧರಾಜು ರವರೊಂದಿಗೆ ನೂರಾರು ಮಂದಿ ಮುಖಂಡರುಗಳು ಕಾರ್ಯಕರ್ತರುಗಳು ಸಾಮೂಹಿಕವಾಗಿ ಜೆಡಿಎಸ್ಗೆ ಸೇರ್ಪಡೆಗೊಂಡರು.
ನಾಪತ್ತೆ: ದೂರು
ಮಂಡ್ಯ: ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯ ಇರುಬನಹಳ್ಳಿ ಗ್ರಾಮದ ಶುಕ್ರ ಅವರು ತಮ್ಮ ಮಗಳು 20 ವರ್ಷದ ಕವಿತಾ ಅವರೊಂದಿಗೆ ಏ.24ರಂದು ನಾಪತ್ತೆಯಾಗಿರುವುದಾಗಿ ಆರಕ್ಷಕ ಉಪ ನಿರೀಕ್ಷಕರು, ಬೆಳ್ಳೂರು ಠಾಣೆಗೆ ದೂರು ನೀಡಿದ್ದಾರೆ. ಕವಿತಾ ಅಂಗವಿಕಲೆಯಾಗಿದ್ದು ಮಾತನಾಡಲು ಬರುವುದಿಲ್ಲ. ಅಂಗವಿಕಲ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅನುತ್ತೀರ್ಣಳು. 5.4 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ. ಕಾಣೆಯಾದ ಸಂದರ್ಭ ಕೆಂಪು ಚೂಡಿದಾರ ಧರಿಸಿದ್ದಳು. ಕಿವಿ ಕೇಳುವುದಿಲ್ಲ. ಸಾಧಾರಣ ಮೈಕಟ್ಟು. ಈ ಚಹರೆ ಪಟ್ಟಿಯುಳ್ಳ ಹುಡುಗಿ ಪತ್ತೆಯಾದಲ್ಲಿ ಕೂಡಲೆ ಪೊಲೀಸ್ ಅಧೀಕ್ಷಕರು, ದೂ- 08232-224500 ಗೆ ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

