ವಾದ್ಯ ತಯಾರಿ ಕಾರ್ಯಗಾರ ಆಯೋಜನೆ
ಕ.ಪ್ರ.ವಾರ್ತೆ ರಾಮನಗರ ಮೇ 2
ಇತ್ತೀಚಿನ ದಿನಗಳಲ್ಲಿ ಜಾನಪದ ಸಂಗೀತ ಕ್ಷೇತ್ರದಲ್ಲಿ ಮೂಲ ಪರಂಪರೆಯ ಚರ್ಮ ವಾದ್ಯಗಳ ಬದಲಿಗೆ ಪ್ಲಾಸ್ಟಿಕ್, ಫೈಬರ್ ವಾದ್ಯಗಳನ್ನು ಬಳಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಪರಂಪರೆಯ ಮೂಲ ಚರ್ಮ ವಾದ್ಯಗಳನ್ನು ತಯಾರು ಮಾಡಿಕೊಂಡು ಭಾರಿಸುವ ನಾದಕ್ಕೂ ಫೈಬರ್ ವಾದ್ಯಗಳ ನಾದಕ್ಕೂ ಬಹಳ ವ್ಯತ್ಯಾಸವಿದೆ.
ಮೂಲ ತಲೆಮಾರಿನ ವಾದ್ಯಗಳನ್ನೇ ತಯಾರು ಮಾಡಿಕೊಂಡು ನುಡಿಸುವುದನ್ನು ಕಲಾವಿದರುಗಳಿಗೆ ತಿಳಿಸಿಕೊಡಲು ವಾದ್ಯ ತಯಾರು ಮಾಡಿಕೊಳ್ಳುವ ಕಾರ್ಯಾಗಾರವನ್ನು ಕರ್ನಾಟಕ ಜಾನಪದ ಅಕಾಡೆಮಿಯು ಆಯೋಜಿಸಿದೆ. ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಚರ್ಮ ವಾದ್ಯ ತಯಾರಿಕಾ ಕಮ್ಮಟ ನಂತರ ರಾಜ್ಯ ಮಟ್ಟದ ಚರ್ಮ ವಾದ್ಯ ಸಮ್ಮೇಳನ ಮತ್ತು ವಿದ್ವಾಂಸರಿಂದ ಜಾನಪದ ಚರ್ಮ ವಾದ್ಯಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ರಣಹಲಿಗೆ ವಾದನ ಪ್ರಕಾರಗಳ ಚರ್ಮವಾದ್ಯಗಳನ್ನು ತಯಾರಿಸುವವರು, ಚರ್ಮ ವಾದ್ಯ ಮೇಳಗಳ ಮುಖ್ಯಸ್ಥರು ತಮ್ಮ ಸಂಪೂರ್ಣ ವಿಳಾಸದ ಮಾಹಿತಿಯನ್ನು ಮೇ 30ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಕಳುಹಿಸಿಕೊಡಲು ಕೋರಿದೆ. ಹೆಚ್ಚಿನ ಮಾಹಿತಿಗೆ ದೂ 080-22215509 ಸಂಪರ್ಕಿಸಲು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

