ಬೆಂಗಳೂರು ಗ್ರಾಮಾಂತರ

ಮಾಲೂರಿನಲ್ಲಿ ಶೇ.75 ಮತದಾನ

Published On :

ಮಾಲೂರು: ತಾಲೂಕಿನ ಕೊಂಡಶೆಟ್ಟಿ ಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಘಟನೆ ಹೊರತು ಪಡಿಸಿದರೆ, ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಶೇ.75 ಕ್ಕೂ ಹೆಚ್ಚು ಮತದಾನವಾಗಿರುವ ವರದಿಯಾಗಿದೆ. ಚುನಾವಣೆ ಆಯೋಗ ಈ ಬಾರಿ ಬೆಳಿಗ್ಗೆ 7 ರಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದ ಹಿನ್ನೆಲೆಯಲ್ಲಿ ಮತದಾರರು ಬೆಳಿಗ್ಗಿನಿಂದಲ್ಲೇ ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಕೈಕೊಟ್ಟ ಮತಯಂತ್ರ: ಪಟ್ಟಣದ 68ನೇ ಸಂಖ್ಯೆಯ ಮತಗಟ್ಟೆ ಸೇರಿದಂತೆ ತಾಲೂಕಿನ ಹಲವಡೆ ಮತಯಂತ್ರ ಕೈ ಕೊಟ್ಟ ಕಾರಣ ಕೆಲವಡೆ ಮತದಾನ ಹದಿನೈದು ನಿಮಿಷ ನಿಧಾನವಾಗಿ ಪ್ರಾರಂಭವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಚೆನ್ನಕೇಶವ ಮತ ಬೆಂಗಳೂರಿನ ದೊಡ್ಡ ಗುಬ್ಬಿ ಮತ ಕೇಂದ್ರದಲ್ಲಿ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ್‌ಗೌಡ ಮತ ಹೂಸಕೋಟೆಯ ಕೋಡಿಹಳ್ಳಿ ಗ್ರಾಮದಲ್ಲಿ ಹಾಗೂ ಹಾಲಿ ಶಾಸಕ ಕೃಷ್ಣಯ್ಯಶೆಟ್ಟಿ ಮತ ಬೆಂಗಳೂರಿನ ರಾಜಾಜಿನಗರದಲ್ಲಿದ್ದ ಕಾರಣ ತಾಲೂಕಿನಲ್ಲಿ ಮತದಾನದಿಂದ ವಂಚಿತರಾಗಿದ್ದರು. ಪಕ್ಷೇತರ ಅಭ್ಯರ್ಥಿ ಜಿ.ಇ.ರಾಮೇಗೌಡ ಪಟ್ಟಣದ ಮತಗಟ್ಟೆ ಸಂಖ್ಯೆ 68 ರಲ್ಲಿ ತಮ್ಮ ಪತ್ನಿ ರಶ್ಮಿ ಸಮೇತ ಬಂದು ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.