ಆನೇಕಲ್: ಬಾಲಕಿಯರ ಮೇಲುಗೈ
ಕ.ಪ್ರ. ವಾರ್ತೆ ಆನೇಕಲ್ ಮೇ 6
ಆನೇಕಲ್ ತಾಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಣೆಯಾಗಿದ್ದು ಶೇ. 77.48 ಫಲಿತಾಂಸ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ತಿಳಿಸಿದ್ದಾರೆ.
ತಾಲೂಕಿನ 4906 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3801 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2416 ಬಾಲಕರ ಪೈಕಿ 1768 ಉತ್ತೀರ್ಣರಾಗಿದ್ದು, 2490 ಬಾಲಕಿಯರ ಪೈಕಿ 2033 ವಿದ್ಯಾರ್ಥಿ ನಿಯರು ಉತ್ತೀರ್ಣರಾಗಿದ್ದು ಬಾಲಕಿಯರು ಮೈಲು ಗೈ ಸಾಧಿಸಿದ್ದಾರೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇ. 65 ಉತ್ತಮ ಫಲಿತಾಂಶ ಬಂದಿದೆ. ಅನುದಾನ ಸಹಿತ ಶಾಲೆಯಲ್ಲಿ ಶೇ. 68.4 ಹಾಗೂ ಅನುದಾನ ರಹಿತ ಶಾಲೆಯಲ್ಲಿ 90.54 ಉತ್ತಮ ಫಲಿತಾಂಶ ಹೊರಹೊಮ್ಮಿದೆ ಎಂದಿದ್ದಾರೆ.
ಶೇ. 100 ಫಲಿತಾಂಶ ಕಂಡ ಶಾಲೆಗಳು: ಆನೇಕಲ್ ಪಟ್ಟಣದ ಸರಸ್ವತಿ ವಿದ್ಯಾ ಶಾಲೆ ಸತತ 5ನೇ ಬಾರಿಗೆ ಶೇ. 100 ಫಲಿತಾಂಶ ಪಡೆದ ಖ್ಯಾತಿಗೆ ಒಳಗಾಗಿದೆ.
ಪಟ್ಟಣದ ಸಂತ ಜೊಸೇಫರ ಶಾಲೆಯು ಶೇ. 100 ಫಲಿತಾಂಶ ಕಂಡಿದೆ. ಆನೇಕಲ್ಲಿನ ಗುರೂಜಿ ಶಾಲೆ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊದಲ ತಂಡ ಪ್ರವೇಶಿಸಿದ್ದು ಶೇ. 100 ಫಲಿತಾಂಶ ಕಂಡಿದೆ ಎಂದು ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
ತಾಲೂಕಿನ ಮುತ್ತಾನಲ್ಲೂರಿನ ಮಹಾತ್ಮ ಶಾಲೆ, ಹರಪನಹಳ್ಳಿಯ ಬೃಂದಾವನ ಮತ್ತು ತಪೋವನ ಪ್ರೌಢಶಾಲೆಗಳು, ಜಿಗಣಿಯ ನವೋದಯ ಶಾಲೆ, ಕಲ್ಲಬಾಳು ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆ, ಹುಲ್ಲಕಸವನ ಹಳ್ಳಿಯ ದೀಕ್ಷಾ ಹೈ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದ ಇತರೆ ಶಾಲೆಗಳಾಗಿವೆ ತಾಲೂಕಿನ ಸರ್ಜಾಪುರದ ಸೈಂಟ್ ಫಿಲೋಮಿಮನಾ ಶಾಲೆಯ ಜೆ. ರಾಹುಲ್ 613 (ಶೇ.98.08) ಅಂಕಗಳನ್ನು ಪಡೆದು ತಾಲೂಕಿಗೆ ಮೊದಲಿಗನಾಗಿದ್ದಾನೆ. ಮುತ್ತಾನಲ್ಲೂರಿನ ಮಹಾತ್ಮ ಶಾಲೆಯ ವಿ. ಅಕ್ಷತಾ 610(97.6) ಅಂಕಗಳನ್ನು ಪಡೆದು ಎರಡನೆಯ ಸ್ಥಾನ ಪಡೆದಿದ್ದಾರೆ. ಅತ್ತಿಬೆಲೆಯ ಸೈಂಟ್ ಫಿಲೋಮಿನಾ ಶಾಲೆಯ ಲಿಖಿತ್ ಎಂ. 608(97.03) ಅಂಕಗಳನ್ನು ಪಡೆದು ಮೂರನೆಯ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

