ನಾಳೆ ಸಾಂಸ್ಕೃತಿಕ ಸಂಜೆ-2013
ರಾಮನಗರ: ನಗರದ ಸಮತ ಸಂಸ್ಥೆ ಹಾಗೂ ಚನ್ನಪಟ್ಟಣದ ಮಾನಸ ಸಂಸ್ಥೆಯಿಂದ ಸಾಂಸ್ಕೃತಿಕ ಸಂಜೆ-2013 ಕಾರ್ಯಕ್ರಮವನ್ನು ಮೇ 11ರ ಸಂಜೆ 4ಕ್ಕೆ ನಗರದ ಐಜೂರಿನ ಪ್ರತಿಬಿಂಬ ಮನೆ ಬಳಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಾನಪದ ಗೀತಗಾಯನ, ಜಾನಪದ ಕಲಾ ಪ್ರದರ್ಶನ, ಕವಿಗೋಷ್ಠಿ ನಡೆಯಲಿದೆ.
ಬೇಸಿಗೆ ಶಿಬಿರ
ರಾಮನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಮನಗರ ವ್ಯಾಪ್ತಿಯ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮೇ 15 ರಿಂದ 24ರವರೆಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಯೋಗ ತರಬೇತಿ, ಕರಾಟೆ, ಸಮೂಹ ಗೀತೆ, ಸಮೂಹ ನೃತ್ಯ, ಮೆಹಂದಿ ತರಬೇತಿ, ಚಿತ್ರಕಲೆ ಈ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಗ್ರಾಹಕರ ಸಂವಾದ ಸಭೆ
ಬೆಸ್ಕಾಂನಿಂದ ಮೇ 13ರ ಮಧ್ಯಾಹ್ನ 3ಕ್ಕೆ ಬಿಡದಿಯ ಉಪ ವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಕರೆಯಲಾಗಿದೆ. ಬಿಡದಿ ಉಪವಿಭಾಗ ವ್ಯಾಪ್ತಿಯಲ್ಲಿನ ಎಲ್ಲಾ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಬೆಸ್ಕಾಂನ ಬಿಡದಿ ಉಪ ವಿಭಾಗದ ಎಇಇ ತಿಳಿಸಿದ್ದಾರೆ.
ಉದ್ಯಮ ನಿರ್ವಹಣಾ
ಅಭಿವೃದ್ಧಿ ತರಬೇತಿ
ನೆಲಮಂಗಲ ಅರಿಶಿನಕುಂಟೆಯ ರುಡ್ಸೆಟ್ ಸಂಸ್ಥೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯ 18 ರಿಂದ 45 ವರ್ಷದೊಳಗಿನ, ಕನ್ನಡ ಓದಲು ಬರೆಯಲು ಬಲ್ಲ ನಿರುದ್ಯೋಗಿ ಯುವಕ-ಯುವತಿಯರಿಗೆ ಜೂನ್ನಲ್ಲಿ ಉಚಿತ ವಸತಿಯುತ ಹೈನುಗಾರಿಕೆ ಹಾಗೂ ಉದ್ಯಮ ನಿರ್ವಹಣಾ ಅಭಿವಣದ್ಧಿ ತರಬೇತಿ ನೀಡಲಿದೆ. ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಬಿಳಿ ಹಾಳೆಯಲ್ಲಿ ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂಣ080-27728166 ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಹನುಮಂತಯ್ಯ ಕಾಲೇಜಿಗೆ ಶೇ.94.11
ತಾಲೂಕಿನ ಅಣ್ಣಹಳ್ಳಿಯ ಶ್ರೀ ಕೆಂಗಲ್ ಹನುಮಂತಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.94.11 ಫಲಿತಾಂಶ ಬಂದಿದೆ. ಸಂತೋಷ್-530 ಹಾಗೂ ಡಿ.ಕೆ.ಕುಸುಮ-521 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇನ್ನುಳಿದಂತೆ 11 ವಿದ್ಯಾರ್ಥಿಗಳು ಪ್ರಥಮ ಹಾಗೂ ಮೂವರು ದ್ವಿತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲೆ ಎನ್.ರತ್ನ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

