ಬೆಂಗಳೂರು ಗ್ರಾಮಾಂತರ

ಶಂಕರ ವಿಜಯ ಕಾವ್ಯವಾಚನ ಇಂದು

Published On :

ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು, ಶೃಗೇರಿ ಶಂಕರಮಠ ಕನಕಪುರ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮದ ಕುಮಾರಮಾಧವ ಶ್ರೀಕಂಠಶಾಸ್ತ್ರಿಗಳು ರಚಿಸಿರುವ ಮಹಾಕಾವ್ಯ ಶಂಕರ ವಿಜಯ ಕಾವ್ಯವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ಮೇ 13 ರಂದು ಕೋಟೆ ಶ್ರೀ ಶಂಕರಮಠ ಸಭಾಂಗಣದಲ್ಲಿ ನಡೆಯಲಿದೆ. ಗಮಕಿ ಪ್ರಮೀಳಾ ಮುರಳೀಧರ್,ಎಂ.ಆರ್.ರಾಮ ಮೂರ್ತಿ,ಬೆ.ಗೋ.ರಮೇಶ್‌ಗಮಕವಾಚನ ಮಾಡಲಿದ್ದು, ಕಾವ್ಯದ ವ್ಯಾಖ್ಯಾನವನ್ನು ವಿದ್ವಾಂಸರುಗಳಾದ ಕಮಲಾವಿಠಲರಾವ್, ಬೆ.ಗೋ.ರಮೇಶ್,ಎಂ.ಆರ್.ಕೇಶವಮೂರ್ತಿ ನಡೆಸಿಕೊಡಲಿದ್ದಾರೆ. ಮೇ 15 ರಂದು ಬುಧವಾರ ಸಮಾರೋಪ ಸಮಾರಂಭ ನಡೆಯಲಿದ್ದು ಎಂ.ಆರ್.ಸತ್ಯನಾರಾಯಣ ರವರ ಕಾವ್ಯವಾಚನ, ಎಂ.ಆರ್.ಕೇಶವಮೂರ್ತಿಯವರಿಂದ ವ್ಯಾಖ್ಯಾನ ನಡೆಯಲಿದೆ. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.