ಬೆಂಗಳೂರು ಗ್ರಾಮಾಂತರ

9 ಕಾಡಾನೆ ದಾಳಿ: ಬೆಳೆ ಹಾನಿ

Published On :

ಕ.ಪ್ರ.ವಾರ್ತೆ  ,   ಮಾಗಡಿ ,  ಮೇ 17
ಕಾಡಾನೆ ದಾಳಿಗೆ ಗುಡ್ಡಹಳ್ಳಿ ಸುತ್ತಮುತ್ತಲ ರೈತರ  ಲಕ್ಷಾಂತರ ರು. ಬೆಲೆ ಬಾಳುವ ತೋಟಗಳು ನಷ್ಟವಾಗಿದೆ.  ಗುರುವಾರ ರಾತ್ರಿ ವೇಳೆ ಸುಮಾರು  9 ಕಾಡಾನೆಗಳು ರೈತರ ತೋಟಗಳಿಗೆ ದಾಳಿ ಮಾಡಿ ಅಡಿಕೆ,ತೆಂಗು, ಮಾವು ತೋಟಗಳಿಗೆ ಲಗ್ಗೆಯಿಟ್ಟು ತುಳಿದು ನಾಶ ಮಾಡಿವೆ. ಇದರಿಂದ ರೈತರ ಲಕ್ಷಾಂತರ ರು ಮೌಲ್ಯದ ಬೆಳೆ ನಷ್ಟವಾಗಿದೆ. ಗುಡ್ಡಹಳ್ಳಿ ಬಳಿ ಇರುವ ನರಸಿಂಹಯ್ಯ ಅವರಿಗೆ ಸೇರಿದ 15 ಅಡಿಕೆ ಮರ, ಫಲಭರಿತ 3 ಹಲಸಿನ ಮರ ಮುರಿದು ಹಾಕಿವೆ.  
ರಾಮಣ್ಣಗೆ ಸೇರಿದ 5 ಅಡಿಕೆ ಮರ, 1 ತೆಂಗಿನ ಮರ, ಶ್ರೀನಿವಾಸ್‌ಗೆ  ಸೇರಿದ 2 ಅಡಿಕೆ ಮರ, ನಾರಾಯಣಪ್ಪಗೆ ಸೇರಿದ 8 ಅಡಿಕೆ ಮರ, ಮೋಹನ್ ಕುಮಾರ್‌ಗ್ಗೆ ಸೇರಿದ 5 ಮಾವಿನ ಮರ, 4 ತೆಂಗಿನ ಮರ, ಕುಂಬಳಕಾಯಿ ಗಂಗಣ್ಣಗೆ ಸೇರಿದ 4 ಅಡಿಕೆ ಮರ, ಬಾಗಿ ಮರ ಫೈಪ್ ನಾಶ ಮಾಡಿದೆ. ವೆಂಕಟರಮಣಪ್ಪ ಮತ್ತು ತಮ್ಮಣ್ಣನಿಗೆ, ಲಿಂಗರಾಜುಗೆ ಸೇರದ 4 ಅಡಿಕೆ ಮರ ಸೇರಿದ ತೆಂಗಿನ ಮರ ಕೆಡವಿ, ತುಳಿದು ನಾಶ ಮಾಡಿವೆ.   ಕಾಡಾನೆ ದಾಳಿಯಿಂದ ಆತಂಕಕ್ಕೊಳಗಾಗಿರುವ ರೈತರು ತುಂಬ ನಷ್ಟ ಅನುಭವಿಸುತ್ತಿರುವುದಾಗಿ ತಮ್ಮ ನೋವನ್ನು ತೋಡಿಕೊಂಡರು.  ಕಳೆದ 2 ವರ್ಷಗಳಿಂದಲೂ ಕಾಡಾನೆ ದಾಳಿಗೆ ತೋಟಗಳು ನಾಶವಾಗುತ್ತಿದ್ದು, ಆತಂಕದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಸಾಲ ಮಾಡಿ ಬೆಳೆದ ಬೆಳೆ ಕೈ ಬರುವಷ್ಟರಲ್ಲಿ ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗುತ್ತಿದ್ದು, ನಮ್ಮ ಬದುಕು ಮೂರಾ ಬಟ್ಟೆಯಾಗಿದೆ. ಅರಣ್ಯ ಇಲಾಖೆ  ಮೇಲಾಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.  ಕಾಡಾನೆ ದಾಳಿಯಿಂದ ಬೆಳೆ ಕಳೆದು ಕೊಂಡಿರುವ ರೈತರು  ಪರಿಹಾರ ಕೋರಿ ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.