ಸೂರದಾಸರ ಜಯಂತಿ ಕಾರ್ಯಕ್ರಮ
ವಿಜಯಪುರ: ಸಂಗೀತದ ಏಳು ಸ್ವರಗಳು ಆಧ್ಯಾತ್ಮಿಕ ಸಾಧನೆಗೆ ಏಳು ಚಕ್ರಗಳ ಅರಿವನ್ನು ಉಂಟುಮಾಡುತ್ತದೆ ಎಂದು ಯೋಗ ಗುರು ರವೀಂದ್ರ ತಿಳಿಸಿದರು.
ಅವರು ಪಟ್ಟಣದ ವಿಜಯ ಕಾಲೇಜಿನಲ್ಲಿ ವಿಕಲ ಚೇತನ ಸಂಗೀತಗಾರರನ್ನೊಳಗೊಂಡ ಸ್ವರ ಸಕ್ಷಮ ಸಂಗೀತ ತಂಡದೊಂದಿಗೆ ಸೂರದಾಸರ ಹಾಗೂ ಪುಟ್ಟರಾಜ ಗವಾಯಿಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ನಾಗಲೋಟದಲ್ಲಿ ಓಡುತ್ತಿರುವ ಇಂದಿನ ಜೀವನ ಚಕ್ರದಲ್ಲಿ ಒತ್ತಡದ ಜೀವನ ಹೆಚ್ಚಾಗಿದ್ದು ನೆಮ್ಮದಿ ಪಡೆಯಬೇಕೆಂದರೆ ಜನ ಸಂಗೀತವನ್ನು ಆಲಿಸುವ ಮೂಲಕ ಒತ್ತಡದಿಂದ ಮುಕ್ತರಾಗಬಹುದು. ಹಿಂದಿ ಸಾಹಿತ್ಯಾಕಾಶದ ನೇಸರ, ಕೃಷ್ಣ ಭಕ್ತಿಯ ಸಾಗರ, ಸಂಗೀತ-ಕಾವ್ಯ ಸಾಹಿತ್ಯದ ತ್ರಿವೇಣಿ ಸಂಗಮದ ಮೇರು ಪರ್ವತವಾದ ಸೂರದಾಸರು ಕವಿತೆಗಳನ್ನು ರಚಿಸಿ , ಸಂಗೀತ , ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಸಕ್ಷಮ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ ಸಮಾಜದಲ್ಲಿ ಸಂಗೀತದ ಮೂಲಕ ಜಾಗೃತಿ ಮೂಡಿಸುವ ಉದ್ದೇಶ ಸಂಘಟನೆಗಿದ್ದು, ಶಾರೀರಿಕ ಸವಾಲುಳ್ಳ ಪ್ರತಿಭಾವಂತ ಸಂಗೀತಗಾರರನ್ನು ಗುರುತಿಸಿ ಅವರ ತಂಡವನ್ನು ರಚಿಸುವ ಉದ್ದೇಶ ಹೊಂದಿದೆ. ಅಂಗವಿಕಲತೆ ಎಂದಿಗೂ ಸಂಗೀತ ಸಾಧನೆಗೆ ಅಡ್ಡಿಯಾಗಲಾರದು ಎಂದರು. ಅಲ್ಪದೃಷ್ಟಿಯುಳ್ಳವರಾದ ವೈ.ಚಂದ್ರಪ್ಪ ಹಾಗೂ ತಬಲಾವಾದ್ಯಗಾರರಾದ ಅಂಜನಪ್ಪ ಜುಗಲ್ ಬಂದಿಯ ಸಂಗೀತ ಕಾರ್ಯಕ್ರಮ ನಡೆಯಿತು. ತಾಲೂಕು ಗಾಣಿಗ ಸಂಘದ ಮಾಜಿ ಖಜಾಂಜಿ ಎಲ್.ನಾಗರಾಜ್, ಕಾಲೇಜಿನ ಸೂಪರಿಟೆಂಡೆಂಟ್ ಕೃಷ್ಣಪ್ಪ, ಸಕ್ಷಮದ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

