ಬೆಂಗಳೂರು ಗ್ರಾಮಾಂತರ

ವಿದ್ಯಾರ್ಥಿಗಳಿಗೆ ಆಹ್ವಾನ

Published On :

ಹೊಸಕೋಟೆ: 5 ರಿಂದ 10 ನೇ ತರಗತಿ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ, ಪ. ವರ್ಗ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಸೇರಬಯಸುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ನಮೂನೆಗಳನ್ನು ಆಯಾಯ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಕಚೇರಿ ವೇಳೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ , ಟಿ.ಜಿ ಬಡಾವಣೆ ಹೊಸಕೋಟೆ ಇವರಿಂದ ಅರ್ಜಿ  ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು 15-6-2013 ರ ಒಳಗಾಗಿ ಸಲ್ಲಿಸತಕ್ಕದ್ದು.
ವಿದ್ಯುತ್ ಸ್ಪರ್ಶ ನಾಲ್ವರಿಗೆ ಗಾಯ
ಬೆಂಗಳೂರು: ಹೊಸ ಟಿವಿಗೆ ಡಿಜಿಟಲ್ ವ್ಯವಸ್ಥೆಯ ತಂತಿ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮಗು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ರಾಜಾಜಿನಗರ 5ನೇ ಹಂತದ ಮಂಜುನಾಥನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ. ಡಿಜಿಟಲ್ ಬಾಕ್ಸ್ನ ತಂತಿ ಅಳವಡಿಸುತ್ತಿದ್ದ ವೇಳೆ ಆ ತಂತಿ ಪಕ್ಕದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವೈರ್ಗೆ ತಾಗಿ ದುರಂತ ಸಂಭವಿಸಿದೆ. ಟವಿ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಸುಬ್ರಮಣ್ಯ(45), ಅವರ ಸಹೋದ್ಯೋಗಿ ಚಿಕ್ಕಣ್ಣ (42), ಮನೆ ಮಾಲೀಕ ಗೋಪಾಲ್(43) ಹಾಗೂ ಅವರ ಪುತ್ರಿ 6 ವರ್ಷದ ಯಶಸ್ವಿನಿ ಗಾಯಗೊಂಡವರು. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಾಲ್ ಅವರ ಮನೆಯಲ್ಲಿ ಟಿವಿ ಕೇಬಲ್ ಅಳವಡಿಸಬೇಕಿತ್ತು, ಅದಕ್ಕಾಗಿ ಸುಬ್ರಮಣ್ಯ ಹಾಗೂ ಚಿಕ್ಕಣ್ಣ ಬಂದಿದ್ದರು. ತಂತಿ ಅಳವಡಿಸಲು ಚಿಕ್ಕಣ್ಣ ಮನೆ ಮೇಲೆ ಹೋಗಿದ್ದರು. ಮನೆಗೆ ಬಂದಿದ್ದ ಕಾರ್ಮಿಕರಿಗೆ ಗೋಪಾಲ್ ಸಹಾಯ ಮಾಡುತ್ತಿದ್ದರು. ಜತೆಯಲ್ಲಿ ಮಗಳೂ ನಿಂತಿದ್ದಳು. ಈ ವೇಳೆ ಚಿಕ್ಕಣ್ಣ ಅವರ ಕೈಯಲ್ಲಿದ್ದ ತಂತಿ ಆಕಸ್ಮಿಕವಾಗಿ ಪಕ್ಕದಲ್ಲಿ ಹಾದುಹೋಗಿದ್ದ ತಂತಿಗೆ ತಾಗಿದೆ. ಇದರಿಂದ ಇದ್ದಕ್ಕಿದ್ದಂತೆ ದೊಡ್ಡ ಸದ್ದಾಗಿ, ಎಲ್ಲರೂ ಕಿರುಚಾಡಿದರು. ಸದ್ದು ಕೇಳಿದ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿದರು.
ಮಳೆ ನೀರು ಪೈಪ್; ದಂಡ
ಬೆಂಗಳೂರು: ಬೆಂಗಳೂರು ಜಲಮಂಡಳಿಯ ಒಳಚರಂಡಿ ಮಾರ್ಗಗಳಿಗೆ ಮಳೆನೀರು ಕೊಳವೆಗಳ ಸಂಪರ್ಕ ಕಲ್ಪಿಸಿದಲ್ಲಿ ಅಂತಹವರ ವಿರುದ್ಧ ಗರಿಷ್ಠ 5 ಸಾವಿರ ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಸಿದೆ. ಮಳೆಗಾಲದಲ್ಲಿ ಮ್ಯಾನ್ಹೋಲ್ಗಳಿಂದ ನೀರು ಉಕ್ಕಿ ಹರಿಯುವುದು ಹಾಗೂ ಚರಂಡಿ ಕಟ್ಟಿಕೊಳ್ಳುತ್ತಿರುವುದು ಹೆಚ್ಚುತ್ತದೆ. ಸಾರ್ವಜನಿಕರು ತಮ್ಮ ಮನೆ ಹಾಗೂ ಕಟ್ಟಡಗಳ ಮಳೆನೀರು ಕೊಳವೆಗಳನ್ನು ಒಳಚರಂಡಿ ಕೊಳವೆಗಳಿಗೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿವೆ. ಯಾರಾದರೂ ಆ ರೀತಿ ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಗರಿಷ್ಠ 5 ಸಾವಿರ ದಂಡ ವಿಧಿಸುವುದಾಗಿ ಮಂಡಳಿ ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.