ಬೆಂಗಳೂರು ಗ್ರಾಮಾಂತರ

ವಿಶೇಷ ನೃತ್ಯ ಕಾರ್ಯಾಗಾರ

Published On :

ರಾಮನಗರ: ಕರ್ನಾಟಕ ಸಂಗೀತ ಮತ್ತು ನಣತ್ಯ ಅಕಾಡೆಮಿಯು ಜೂನ್ 3ರಿಂದ 7ರವರೆಗೆ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ವಿಶೇಷ ನೃತ್ಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.  ಕಾರ್ಯಾಗಾರದಲ್ಲಿ ಪ್ರತಿ ದಿನ ಬೆಳಗ್ಗೆ 7 ರಿಂದ 8.30ರವರೆಗೆ ಆಯಾ ಕ್ಷೇತ್ರಗಳಲ್ಲಿ ಹಿರಿಯ ಮತ್ತು ಪರಿಣಿತ ಹೊಂದಿರುವವರಿಂದ ತರಬೇತಿ ನೀಡಲಾಗುವುದು. ಭರತನಾಟ್ಯ ಕ್ಷೇತ್ರದಲ್ಲಿ ಪದ್ಮಿನಿ ರಾಮಚಂದ್ರನ್,  ಕಥಕ್ ವಿಭಾಗದಲ್ಲಿ ಜಯಂತಿ ಈಶ್ವರಪುತ್ತಿ, ಕೂಚಿಪುಡಿಯಲ್ಲಿ ಲಕ್ಷ್ಮೀ ರಾಜಾಮಣಿ, ಅಭಿನಯ ಕ್ಷೇತ್ರದಲ್ಲಿ ಇಂದಿರಾ ಕಡಾಂಬಿ ಇವರು ತರಬೇತಿ ನೀಡುವರು.  ನಿತ್ಯ ನೃತ್ಯದ ಜತೆಗೆ ಸಂಜೆ ಯೋಗಾಭ್ಯಾಸ ಪ್ರದರ್ಶನ ಏರ್ಪಡಿಸಲಾಗುವುದು. ನೃತ್ಯ ಪಾಠವನ್ನು ಡಾ.ಕರುಣಾ ವಿಜಯೇಂದ್ರ, ನಂದಿನಿ ಈಶ್ವರ್ ಮತ್ತು ಎಂ.ಎಲ್.ಸಾಮಗ ನೀಡುವರು.  ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷ ನೃತ್ಯದಲ್ಲಿ ಶಿಕ್ಷಣ ಪಡೆದಿರಬೇಕು. ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಕಾರ್ಯಾಗಾರವು ಉಚಿತವಾಗಿದ್ದು, ಅಕಾಡೆಮಿಯಿಂದ ಶಿಬಿರಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇ 30ರೊಳಗೆ ಅಕಾಡೆಮಿಯ ದೂ. 080-22215072 ಅಥವಾ ಇ ಮೇಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.