ಸಾಮೂಹಿಕ ಉಪನಯನ ಕಾರ್ಯಕ್ರಮ
ಆನೇಕಲ್ಲು: ಪ್ರಾಚೀನ ಕಾಲದಿಂದಲೂ ಬ್ರಹ್ಮಚರ್ಯ, ಗೃಹಸ್ಥ, ಸನ್ಯಾಸ ಹಾಗೂ ವಾನಪ್ರಸ್ಥ ಎಂಬ ನಾಲ್ಕು ಆಶ್ರಮ ಧರ್ಮಗಳ ಪಾಲನೆ ಪ್ರಚಲಿತದಲ್ಲಿದೆ. ಉಪನಯನ ಕರ್ಮದ ನಂತರ ಗುರುಕುಲ ಸೇರುವ ವಿದ್ಯಾರ್ಥಿಗಳು ಪೂರ್ಣ ಅಧ್ಯಯನ ಮುಗಿಸಿ ಮರಳಿ ಮನೆ ಸೇರುವ ಪದ್ಧತಿ ಹಿಂದೂ ಧರ್ಮದ ಪ್ರಮುಖ ಘಟ್ಟವಾಗಿದೆ ಎಂದು ಆನೇಕಲ್ ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಹಾಗೂ ಚಂದಾಪುರ ವಿಪ್ರ ಮಹಾ ಸಭಾ ಅಧ್ಯಕ್ಷ ಎನ್ ಎಸ್. ನಾಗರಾಜ್ ತಿಳಿಸಿದ್ದಾರೆ.
ಅವರು ಅತ್ತಿಬೆಲೆಯ ಕೋಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಅತ್ತಿಬೆಲೆಯ ಗಾಯತ್ರಿ ವಿಪ್ರ ವೃಂದ ಹಾಗೂ ಚಂದಾಪುರದ ವಿಪ್ರ ಮಹಾ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ನೂತನ ವಟುಗಳನ್ನುದ್ದೇಶಿಸಿ ಮಾತನಾಡಿದರು.
ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಶೈಲಿಯಲ್ಲಿ ಉಪನಯನ ಸಂಸ್ಕಾರ ನೆರವೇರಿಸಲಾಯಿತು. ಸಮಿತಿಯ ರಾಮಕೃಷ್ಣ, ನಾಗೇಂದ್ರ, ಪ್ರಭಾಕರ್, ಗೌರಿಶಂಕರ್, ಕೃಷ್ಣಮೂರ್ತಿ, ನಾಗರಾಜ್ ಉಪಸ್ಥಿತರಿದ್ದರು.
ಜನಸಂಪರ್ಕ ಸಭೆ
ಹೊಸಕೋಟೆ: ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರಿಂದ ಪರಿವೀಕ್ಷಣಾ ಮಂದಿರದಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಸಬೆಗೆ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

