ರಸ್ತೆಯಲ್ಲೇ ಮನೆ ನಿರ್ಮಾಣ ತಾಲೂಕು ಆಡಳಿತ ಮೌನ
ಕನಕಪುರ: ಕನಕಪುರದ ಗ್ರಾಮದೇವತೆಯಾದ ಬಾಣಂತ ಮಾರಮ್ಮನ ಮೂಲಸ್ಥಾನ ಬಾಣಂತಮಾರಮ್ಮನ ಬೆಟ್ಟಕ್ಕೆ ಹೊಗುವ ಮಾರ್ಗದಲ್ಲಿ ರಾಚಯ್ಯನ ದೊಡ್ಡಿ ಗ್ರಾಮದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆಯಲ್ಲಿಯೇ ಮನೆ ಕಟ್ಟುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕೂತಗಾನಗಳ್ಳಿಯ ಶ್ರೀ ಬಾಣಂತಮಾರಮ್ಮ ದೇವಾಲಯದ ಮುಂದೆ ಒಟ್ಟುಗೂಡಿದ ಗ್ರಾಮಸ್ಥರು ತಹಸೀಲ್ದಾರ್ ಡಾ. ದಾಕ್ಷಾಯಣಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಕ್ರಮವಾಗಿ ಮನೆ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಲಂಬಾಣಿಗರೇ ಪೂರ್ಣವಾಗಿ ವಾಸವಾಗಿರುವ ರಾಚಯ್ಯನದೊಡ್ಡಿ ಗ್ರಾಪಂ ಸದಸ್ಯ ಮರಿಯಾನಾಯ್ಕ ಮಾತನಾಡುತ್ತಾ, ತಲ ತಲಾಂತರದಿಂದ ಗ್ರಾಮಸ್ಥರು ಇದೇ ಮಾರ್ಗವನ್ನು ಸಂಚಾರಕ್ಕೆ ಬಳಸುತ್ತಿದ್ದು ರಾಜ್ಯಸಾರಿಗೆ ಬಸ್ ಕೂಡಾ ಸಂಚರಿಸುತ್ತಿದೆ. ಈಗ ವಿವಾದ ಪ್ರಾರಂಭವಾದ ನಂತರ ಬಸ್ ಸಂಚಾರ ಸ್ಥಗಿತಗೊಂಡಿದ್ದು ಜನರು ವಾಹನ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಹತ್ತಾರು ಬಾರಿ ತಹಸೀಲ್ದಾರರಿಗೆ ಅರ್ಜಿಸಲ್ಲಿಸಿದರೂ ಸ್ಪಷ್ಟೀಕರಣ ನೀಡದೆ, ಸಮಸ್ಯೆಯನ್ನು ಬಗೆಹರಿಸದೆ ಜಾರಿಕೊಳ್ಳುತ್ತಿದ್ದಾರೆಎಂದು ದೂರಿದರು.
ಶಾಸಕ ಡಿ.ಕೆ.ಶಿವಕುಮಾರ್ ಅವರು ಬಾಣಂತಮಾರಿ ಬೆಟ್ಟದ ರಸ್ತೆ ನಿರ್ಮಾಣಕ್ಕೆ ಒಂದೂವರೆ ಕೋಟಿ ಮಂಜೂರಾತಿ ದೊರಕಿಸಿಕೊಟ್ಟಿದ್ದಾರೆ. ಈ ಒಂದು ಸಣ್ಣ ಸಮಸ್ಯೆಯಿಂದಾಗಿ ರಸ್ತೆ ನಿರ್ಮಾಣವೇ ದೂರವಾಗಿ ಉಳಿದಿದೆ. ಅಭಿವೃದ್ಧಿ ದೂರಾಗುತ್ತಿದೆ, ಶಾಸಕರೂ ಗಮನಹರಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಮರಿಯಾನಾಯ್ಕ ವಿನಂತಿಸಿದರು. ಪ್ರತಿಭಟನೆಯಲ್ಲಿ ಮುಖಂಡರುಗಳಾದ ಕೃಷ್ಣಾನಾಯ್ಕ, ರಂಗಾನಾಯ್ಕ, ಗೋವಿಂದ, ರಂಗಸ್ವಾಮಿನಾಯ್ಕ ಪಾಲ್ಗೊಂಡಿದ್ದರು.
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಬಾಲಕಿ ಶರಣು
ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಚಿಕ್ಕಗೊಲ್ಲರಹಟ್ಟಿ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದವಳನ್ನು ತನುಷ (13) ಎಂದು ಗುರುತಿಸಲಾಗಿದೆ. ಈಕೆ ತನ್ನ ಅಜ್ಜಿ ಮನೆಗೆ ಬಂದಿದ್ದಾಗ ಮನೆಯ ಕಾಂಪೌಂಡ್ನಲ್ಲಿದ್ದ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಈಕೆಯ ತಂದೆ ಶ್ರೀಧರ್ ಮತ್ತು ತಾಯಿ ಪೂರ್ಣಿಮ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದಾರೆ. ತಂದೆ ತಾಯಿ ನಡುವೆ ನಡೆಯುತ್ತಿದ್ದ ಜಗಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

