ಬೆಂಗಳೂರು ಗ್ರಾಮಾಂತರ

ಮಂಡಳಿಗೆ ನೇಮಕ; ಅಭಿನಂದನೆ

Published On :

ಕನಕಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರನ್ನಾಗಿ ಕರ್ನಾಟಕ ರಾಜ್ಯ ಸರ್ಕಾರ ಕನಕಪುರದ ಮಹದೇವ ನಾಯ್ಕ ಅವರನ್ನು ನೇಮಕ ಮಾಡಿದೆ. ಕಾರ್ಮಿಕ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕಟ್ಟಡ ಕಾರ್ಮಿಕ ಮಂಡಳಿ ನಿರ್ದೇಶಕ ಮಹದೇವ ನಾಯ್ಕ ತಮ್ಮನ್ನು ಆರಿಸಲು ಬೆಂಬಲಿಸಿದ ಶಾಸಕ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಪರಮೇಶ್ವರ ನಾಯ್ಕ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮುಖಂಡರ ಹಾಗೂ ಪಕ್ಷದ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುವುದಾಗಿ ಹೇಳಿದ್ದಾರೆ. ನೂತನ ನಿರ್ದೇಶಕ ಮಹದೇವ ನಾಯ್ಕ ಅವರನ್ನು ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ, ಕಾಂಗ್ರೆಸ್ ವಕ್ತಾರ ಮರಸಪ್ಪ(ರವಿ), ಗ್ರಾಪಂ ಅಧ್ಯಕ್ಷ ಗೋಪಾಲನಾಯ್ಕ, ಚಂದ್ರಮೌಳಿ, ಕೇಬಲ್ ಮಹದೇವನಾಯ್ಕ, ಮರಿಯಾನಾಯ್ಕ, ಬಲರಾಮನಾಯ್ಕ ಅಭಿನಂದಿಸಿದ್ದಾರೆ.

ಲಯನ್ಸ್ ಕ್ಲಬ್‌ನಿಂದ ಕಣ್ಣಿನ ಚಿಕಿತ್ಸಾ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 189ನೇ ಮಾಸಿಕ ಉಚಿತ ಕಣ್ಣಿನ ತಪಾಸಣೆ ಮತ್ತು ಆಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು. ಸೈಟ್ ಫಸ್ಟ್‌ನ ಜಿಲ್ಲಾ ಮುಖಂಡ ಕೆ. ಸತ್ಯನಾರಾಯಣ ಶಿಬಿರವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಜಗತ್ತಿನಲ್ಲಿ ನೇತ್ರದಾನಕ್ಕಿಂತ ಶ್ರೇಷ್ಠದಾನವಿಲ್ಲ. ದೃಷ್ಠಿಹೀನರಿಗೆ ದೃಷ್ಠಿ ನೀಡುವ ಮಹತ್ವದ ಕಾರ್ಯ ಇದಾಗಿದೆ. ಅದೇ ರೀತಿ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಸ್ತ್ರಚಿಕಿತ್ಸೆ ಮತ್ತು ಉಚಿತ ತಪಾಸಣೆ ಶಿಬಿರ ಅತ್ಯಂತ ಸ್ತುತ್ಯಾರ್ಹ ಎಂದರು. ಮಾಜಿ ನಗರಸಭಾ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಮತ್ತಿತರರು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಶಿಬಿರವನ್ನು ಎಸ್. ಧನಲಕ್ಷ್ಮೀ, ಎಂ. ಆನಂದ್ ಕುಟುಂಬ ಪ್ರಾಯೋಜಿಸಿತ್ತು. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ ಮತ್ತು ಅಕ್ಷಿ ಜೋಡಣಾ ಸಂಸ್ಥೆ, ದೊಡ್ಡಬಳ್ಳಾಪುರ ಲಯನೆಸ್ ಕ್ಲಬ್ ಮತ್ತು ಲಯನ್ಸ್ ಚಾರಿಟೀಸ್ ಟ್ರಸ್ಟ್ ಸಹಯೋಗ ನೀಡಿದ್ದವು.

ಹೊಲಿಗೆ ತರಬೇತಿ
ಮಾಗಡಿ: ಇಲ್ಲಿನ ಚೈತನ್ಯ ಪುರೋಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಉಚಿತವಾಗಿ ಹೊಲಿಗೆ ಯಂತ್ರ ತರಬೇತಿ ನೀಡಲಾಗುವುದು ಎಂದು ಚೈತನ್ಯ ಪುರೋಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕ ಶಿವಣ್ಣ ತಿಳಿಸಿದ್ದಾರೆ. ವಿವರಕ್ಕೆ ಮೊ. 97317 34047, 95386 89767 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.