ಬೆಂಗಳೂರು ಗ್ರಾಮಾಂತರ

ಶಾಶ್ವತ ನೀರಾವರಿಗೆ ಪಕ್ಷಾತೀತ ಹೋರಾಟ ಅನಿವಾರ್ಯ

Published On :

ಕ.ಪ್ರ.ವಾರ್ತೆ ಮಾಗಡಿ ನ.25
ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಲು ಪಕ್ಷಾತೀತ ಹೋರಾಟ ಅನಿವಾರ್ಯ ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಕರೆ ನೀಡಿದರು.
ಅವರು ಮಾಗಡಿ ಪಟ್ಟಣದ ಸೋಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನೀರಾವರಿ ತಜ್ಞ ಪರಮಶಿವಯ್ಯ ವರದಿ ಯತಾವಥ್ ಜಾರಿಗೊಳಿಸುವಂತೆ ಆಗ್ರಹಿಸಲು  ನ.27 ರಂದು ಜಿಲ್ಲೆಯ ಎಪಿಎಂಸಿ ಯಾರ್ಡ್‌ನಿಂದ ಕಂದಾಯ ಭವನದ ವರೆಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ  ಜಿಲ್ಲೆ ಮತ್ತು ತಾಲೂಕಿನಾದ್ಯಂತ ರೈತ ಬಂಧುಗಳು, ನಾಗರಿಕರು, ಚಿಂತಕರು, ಸಾಹಿತಿಗಳು, ವಿವಿಧ ಸಂಘ, ಸಂಸ್ಥೆ  ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥಾ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಬೃಹತ್ ಜಾಥಾ: ಶಾಶ್ವತ ನೀರಾವರಿಗಾಗಿ ಪಕ್ಷ ಭೇದ ಮರೆತು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಬೃಹತ್ ಜಾಥಾದಲ್ಲಿ ಭಾಗವಹಿಸುವಂತೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿಕರೆ ನೀಡಿದರು.
ಈಗಾಗಲೇ  ಶಾಶ್ವತ ನೀರಾವರಿ ಯೋಜನೆಗೆ ಖಾಸಗಿಯವರಿಂದ ಡಿಪಿಆರ್ ತಯಾರಿಸಲಾಗುತ್ತಿದ್ದು, ನಂತರ ತಾಂತ್ರಿಕ ಸಹಾಯ ಸಮಿತಿ ಮುಂದೆ ಹೋಗಲಿದೆ. ತಾಂತ್ರಿಕ ಸಮಿತಿ ಅನುಮೋದನೆ ನೀಡಿದ ನಂತರ  ಸರ್ಕಾರದಿಂದ ಅನುಮೋದನೆ ಪಡೆದ ನಂತರ ಟೆಂಡರ್ ಕರೆದು, ಯೋಜನೆಗೆ ಸರ್ಕಾರ ಡಿಸೆಂಬರ್ ತಿಂಗಳಲ್ಲಿ ಭೂಮಿ ಪೂಜೆ ಮಾಡಲಿದೆ ಎಂದು ಪಿಎಲ್‌ಡಿ ಬ್ಯಾಂಕ್  ಮಾಜಿ ಅಧ್ಯಕ್ಷ ಎಚ್.ಜಿ. ಗಿರಿಯಣ್ಣ  ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂದೋಲನಕ್ಕೆ ಪಕ್ಷಾತೀತವಾಗಿ ಬೆಂಬಲ  ನೀಡಬೇಕಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್. ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಮುದ್ದುರಾಜ ಯಾದವ್, ಸದಸ್ಯ ಎಂ.ಕೆ.ಧನಂಜಯ, ತಾ.ಪಂ. ಅಧ್ಯಕ್ಷ ಜಿ.ಕೃಷ್ಣ,  ಹೋರಾಟ ಸಮಿತಿಯ ಸಂಚಾಲಕ ಚಕ್ರಭಾವಿ ಮಾರೇಗೌಡ, ತ್ಯಾಗದೆರೆಪಾಳ್ಯದ ರಂಗಸ್ವಾಮಿ,ಸಿ. ಜಯರಾಂ, ಜುಟ್ಟನಹಳ್ಳಿಯ ಜಯರಾಮ, ಬಲರಾಮು, ಎಲ್.ಎನ್.ಸ್ವಾಮಿ, ಕಲ್ಕೆರೆ ಶಿವಣ್ಣ, ಮಹಮದ್ ಇನಾಯತ್  ಉಲ್ಲಾ ಇತರರು ಮಾತನಾಡಿದರು.
 ತಾ.ಪಂ. ಮಾಜಿ ಅಧ್ಯಕ್ಷ ಜಿ.ವಿ. ರಾಮಣ್ಣ, ಪೊಲೀಸ್ ರಾಮಣ್ಣ, ಸದಸ್ಯ ಅರುಂದತಿ ಚಿಕ್ಕಣ್ಣ, ಈಡಿಗ ಸಮಾಜದ ಬಸವರಾಜು ಮೂರ್ತಿ, ನಾಗರಾಜು, ಕನ್ನಡ ಕೂಟದ ಸಂಚಾಲಕ ಟಿ.ಎಂ. ಶ್ರೀನಿವಾಸ್, ಮಾರಣ್ಣ, ದೇವರಾಜು, ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.