ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಕುಂದು-ಕೊರತೆ ಸಭೆ
ದೊಡ್ಡಬಳ್ಳಾಪುರ: ತಾಲೂಕು ವ್ಯಾಪ್ತಿಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರುಗಳ ವಿಲೇವಾರಿ ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ನೇತೃತ್ವದಲ್ಲಿ ಡಿ.2ರ ಸೋಮವಾರ ಇಲ್ಲಿನ ಒಕ್ಕಲಿಗರ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಾರ್ವಜನಿಕರ ಕುಂದು-ಕೊರತೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ವಿವಿಧ ಸಂಘಟನೆಗಳು, ಸಾರ್ವಜನಿಕರು ಪಾಲ್ಗೊಂಡು ತಾವು ಸಲ್ಲಿಸಿದ್ದ ದೂರುಗಳ ಬಗ್ಗೆ ಮಾಹಿತಿ ವಿಲೇವಾರಿ, ದೂರು ಸಲ್ಲಿಕೆ, ನೇರ ಹಾಗೂ ಮುಕ್ತ ಚರ್ಚೆಯಲ್ಲಿ ಭಾಗವಹಿಸಬಹುದು ಎಂದು ತಹಶೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.
ಆರೋಗ್ಯ ರಕ್ಷಾ  ಸಮಿತಿ ರಚನೆ
ಕನಕಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ನೂತನವಾಗಿ ಆರೋಗ್ಯ ರಕ್ಷಾ ಸಮಿತಿ ರಚಿಸಲಾಗಿದೆ ಎಂದು ಆಡಳಿತಾಧಿಕಾರಿ ಡಾ.ವಿವೇಕ್ದೊರೈ ತಿಳಿಸಿದ್ದಾರೆ. ಕನಕಪುರದ ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಸಿದ್ಧತೆಗಳು ನಡೆದಿದ್ದು, ಬಡವರಿಗೆ, ರೈತರಿಗೆ ಹೆಚ್ಚಿನ ಸವಲತ್ತು ಒದಗಿಸುವ ಉದ್ದೇಶದಿಂದ ಆರೋಗ್ಯರಕ್ಷಾ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಡಾ.ದೊರೈ ಹೇಳಿದ್ದಾರೆ. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿ ಶಾಸಕ ಡಿ.ಕೆ.ಶಿವಕುಮಾರ್, ಸದಸ್ಯರಾಗಿ ವಿಪ ಸದಸ್ಯ ಇ.ಕೃಷ್ಣಪ್ಪ, ತಹಸೀಲ್ದಾರ್ ಡಾ.ದಾಕ್ಷಾಯಣಿ, ಜಿಪಂ ಕಾರ್ಯಪಾಲಕ ಅಭಿಯಂತರ ಗುರುಸ್ವಾಮಿ, ಕೆ.ಟಿ.ಕೃಷ್ಣಪ್ಪ,  ಸದಸ್ಯ ಕಾರ್ಯದರ್ಶಿಗಳಾಗಿ ಡಾ.ವಿವೇಕ್ದೊರೈ ನೇಮಕಗೊಂಡಿದ್ದಾರೆ. ಅಧಿಕಾರೇತರ ಸದಸ್ಯರುಗಳಾಗಿ ಪದ್ಮಮ್ಮ, ಹೆಚ್.ಕೆ.ವಿಜಯಕುಮಾರ್, ಹೆಚ್.ಎಂ. ರಮೇಶ್, ಕೆ.ಜಿ. ಬೈರಪ್ಪ, ನಾಗೇಶ್, ಸೈಯದ್ಮಲ್ಲಿಕ್ ಸೂಚಿತರಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಪ ವಿಭಾಗಾಧಿಕಾರಿ ಡಾ.ಸ್ನೇಹಾ, ಡಾ.ದಾಕ್ಷಾಯಣಿ, ಡಾ.ವಿವೇಕ್ದೊರೈ,  ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ.ನಾಯಕ್, ಲೋಕೋಪಯೋಗಿ ಇಲಾಖೆಯ ಎಇಇ ಕೆ.ಟಿ.ಪ್ರಕಾಶ್, ಮಾದೇಶ್, ಆರಕ್ಷಕ ವೃತ್ತ ನಿರೀಕ್ಷಕ ಸಿದ್ದೇಗೌಡ, ಡಾ.ವೀಣಾ ನೇಮಕಗೊಂಡಿದ್ದಾರೆ.
ಯುವಕ ನಾಪತ್ತೆ
ಸೂಲಿಬೆಲೆ: ಪಟ್ಟಣದಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕನೊಬ್ಬ ನಾಪತ್ತೆಯಾಗಿದ್ದು, ಈತನನ್ನು ಪತ್ತೆ ಮಾಡುವಂತೆ ಕೋರಿ ಈತನ ತಾಯಿ ಲಕ್ಷಮ್ಮ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ದರ್ಶನ್ ಎಸ್.ಆರ್ ನಾಪತ್ತೆಯಾಗಿರುವ ವ್ಯಕ್ತಿ, ವಯಸ್ಸು-22 ವರ್ಷ, 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ,ಗೋಧಿ ಮೈಬಣ್ಣ, ಎಡಗೈ ಅಂಗವೈಕಲ್ಯದಿಂದ ಕೂಡಿದೆ. ಮಾತನಾಡಲು ಬರುವುದಿಲ್ಲ. ಹಳದಿ ಬಣ್ಣದ ಟಿ ಶರ್ಟ್ ಧರಿಸಿದ್ದಾನೆ. ಸುಳಿವು ಸಿಕ್ಕವರು ದೂ.ಸಂಖ್ಯೆ 080-27952415 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.