ಪಾಪದ ಹಣ ವಿತರಿಸಿ ಕಾಂಗ್ರೆಸ್ ಗೆಲ್ಲುವ ತಂತ್ರ
ಕೊಳ್ಳೇಗಾಲ: ಲೋಕಸಭೆ ಚುನಾವಣೆಯಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಾಪದ ಹಣ ಹಂಚುವ ಕೆಲಸದಲ್ಲಿ ನಿರತವಾಗಿದೆ. ಮತದಾರರು ಇವರು ನೀಡುವ ಹಣವನ್ನು ಪಡೆದು ಚರ್ಚ್, ಮಸೀದಿ ಹಾಗೂ ದೇವಾಲಯಗಳಿಗೆ ನೀಡಬೇಕು, ಆ ಮೂಲಕ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಸಚಿವ ಬೆಂಕಿ ಮಹದೇವ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಪರಮೇಶ್ವರರನ್ನು ಸಿದ್ದರಾಮಯ್ಯ ಅವರೇ ಕೊರಟಗೆರೆಯಲ್ಲಿ ಉದ್ದೇಶಪೂರ್ವಕವಾಗಿ ಸೋಲಿಸಿದ್ದಾರೆ. ಇಲ್ಲದಿದ್ದರೆ ಕುರುಬ ಸಮುದಾಯದ ಮತಗಳಿರುವ ಬೂತ್ನಲ್ಲಿ ಏಕೆ ಕಡಿಮೆ ಮತಗಳು ಲಭ್ಯವಾದವು.
ಅಲ್ಲದೆ ತಮ್ಮ ಸಮುದಾಯದ ಮತ ಸೆಳೆಯಲು ಸ್ಪಷ್ಟ ನಿರ್ದೇಶನ ನೀಡಿದ್ದ ಸಿದ್ದರಾಮಯ್ಯ ಕೊರಟಗೆರೆಯಲ್ಲಿ ಇದನ್ನು ಏಕೆ ಮಾಡಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ನಾನು ಕಾಂಗ್ರೆಸ್ನಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಬಹಿರಂಗವಾಗಿಯೇ ಹೇಳಿದ್ದೆ. ಮತ್ತೊಂದು ಸಂದರ್ಭದಲ್ಲಿ ಕೆ.ಹೆಚ್. ರಂಗನಾಥ್ ಅವರನ್ನಾದರೂ ಈ ಬಾರಿ ಮುಖ್ಯಮಂತ್ರಿ ಮಾಡಿ ಎಂದೂ ಹೇಳಿದ್ದೆ. ಆದರೆ ದಲಿತರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಟೀಕಿಸಿದರು.
ಬಿಜೆಪಿ ಬಗ್ಗೆ ಹೊಟ್ಟೆ ಕಿಚ್ಚು ಪಡುವವರು ಪಕ್ಷ ದಲಿತರು, ಹಿಂದುಳಿದವರನ್ನು ಕಡೆಗಣಿಸಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಸಜ್ಜನ ವ್ಯಕ್ತಿ ಎ.ಆರ್.ಕೃಷ್ಣಮೂರ್ತಿ ಅವರು 45 ಸಾವಿರ ಮತಗಳ ಅಂತರದಿಂದ ಖಂಡಿತ ಗೆಲವು ಸಾಧಿಸಲಿದ್ದಾರೆ. ಅವರ ಗೆಲವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತುಂಬು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಕ್ಷೇತ್ರದ ಮತದಾರರೊಂದಿಗೆ ಸರಿಸಮಾನವಾಗಿ ಸ್ಪಂದಿಸುತ್ತಿಲ್ಲ. ಜನಪರ ಕಾಳಜಿ ಪ್ರದರ್ಶಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿ ಮರೆತಿದೆ ಎಂದ ಟೀಕಿಸಿದರು.
ಕಾರ್ಯಕರ್ತರ ಒತ್ತಡದಿಂದ ನಾನು ಬಿಜೆಪಿ ಸೇರಿದ್ದೇನೆ ವಿನಾ ಮಲ್ಲಿಕಾರ್ಜುನಯ್ಯ ಪಕ್ಷ ಬಿಟ್ಟ ಮೇಲೆ ಎಂಬುದು ಸತ್ಯ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದರು. ಬೇಷರತ್ ನಾನು ಪಕ್ಷ ಸೇರಿದ್ದೇನೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದು ತಿಳಿಸಿದರು. ತಾಪಂ ಸದಸ್ಯ ತಿಮ್ಮರಾಜಿಪುರ ಪುಟ್ಟಣ್ಣ, ಬೂದಿತಿಟ್ಟು ಶಿವಕುಮಾರ್, ಐಡಿಯಾ ಮೂರ್ತಿ, ಬಸ್ತಿಪುರಸ್ವಾಮಿ, ಚಿನ್ನಸ್ವಾಮಿಮಾಳಿಗೆ, ವೀರೇಂದ್ರ ಪ್ರಸಾದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

