ಬೆಂಗಳೂರು ಗ್ರಾಮಾಂತರ

ಆಸ್ತಿ ಸಂಬಂಧ ಮಹಿಳೆ ಕೊಲೆ

Published On :

ಚನ್ನಪಟ್ಟಣ: ಆಸ್ತಿ ವಿಷಯದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಎಸ್.ಎಂ.ಹಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಸೀತಾಲಕ್ಷ್ಮಿ(40) ಮೃತ ಮಹಿಳೆಯಾಗಿದ್ದು, ಗ್ರಾಮದ ಮುನಿಸ್ವಾಮಾಚಾರ್ ಎಂಬವರನ್ನು ಈಕೆ ಮದುವೆಯಾಗಿದ್ದು ಕಳೆದ 6 ತಿಂಗಳ ಹಿಂದೆ ಇವರ ಪತಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು.
ಈ ಹಿಂದೆ ಆಸ್ತಿ ವಿಷಯಕ್ಕೆ ಈಕೆ ಮತ್ತು ಪತಿಯ ಸಂಬಂಧಿಕರ ನಡುವೆ ಜಗಳ ನಡೆದು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪಿನ ವಿರುದ್ಧ ದೂರು ದಾಖಲಾಗಿತ್ತು. ಗಲಾಟೆ ನಡೆದ ಬಳಿಕ ತುಮಕೂರಿನಲ್ಲಿ ವಾಸವಾಗಿದ್ದ ಈಕೆ ಶುಕ್ರವಾರ ಮಧ್ಯಾಹ್ನ ಎಸ್.ಎಂ. ಹಳ್ಳಿಗೆ ಬಂದಿದ್ದರು.
ಗ್ರಾಮದ ಮುಂಭಾಗದಲ್ಲಿರುವ ದೇವಾಲಯದಬಳಿ ಮಚ್ಚಿನಿಂದಹಲ್ಲೆ ಮಾಡಿ ಕೊಲೆ ಮಾಡಿದ್ದು, ಈಸಂಬಂಧ ದೂರು ದಾಖಲಿಸಿ ಕೊಂಡಿರುವ ಅಕ್ಕೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.