ಬೆಂಗಳೂರು ಗ್ರಾಮಾಂತರ

ಪುರಂದರದಾಸರ ಕೊಡುಗೆ ಅನನ್ಯ

Published On :

ಕನಕಪುರ: ಕರ್ನಾಟಕ ಸಂಗೀತ ಪಿತಾಮಹರೆಂದೇ ಖ್ಯಾತರಾದ ಪುರಂದರದಾಸರು ಕನ್ನಡ ಸಾಹಿತ್ಯ, ಸಂಸ್ಕೃತಿ,ಪರಂಪರೆಗಳಿಗೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ಸಮಾಜಸೇವಕಿ ಕಲ್ಪನಾ ಸುಂದರೇಶ್ ಹೇಳಿದ್ದಾರೆ.
ಅವರು ಕನಕಪುರದ ಕೋಟೆ ಶ್ರೀ ಶಂಕರ ಮಠದಲ್ಲಿ ಪುರಂದರ ದಾಸರ ಆರಾಧನೆ ಅಂಗವಾಗಿ ಆಯೋಜಿಸಿದ್ದ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸವರೇಣ್ಯ ಪುರಂದರರು ಕೀರ್ತನ ಸಾಹಿತ್ಯದ ಮೇರುಪರ್ವತವಾಗಿದ್ದು ದಾಸಸಾಹಿತ್ಯದ ಬುನಾದಿಯಾಗಿದ್ದಾರೆ. ಭಕ್ತಿಪಂಥವನ್ನು ಕರ್ನಾಟಕ ಮಾತ್ರವಲ್ಲಾ ದಕ್ಷಿಣ ಭಾರತಾದ್ಯಂತ ಸಂಗೀತದ ಮೂಲಕ ಪಸರಿಸಿದ ಕೀರ್ತಿ ಅವರದ್ದು ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಗಾಯಕಿ ವಿಜಯಾಶಂಕರ್, ವಿಜಯಲಕ್ಷ್ಮೀಪ್ರಕಾಶ್ ತಂಡವದರಿಂದ ಕೀರ್ತನೆಗಳ ಗಾಯನ ನಡೆಯಿತು. ಮುಖ್ಯಅತಿಥಿಗಳಾಗಿ ಗಾಯಕರಾದ ಹೊಳಸಾಲಯ್ಯ, ಚಂದ್ರಾಜ, ಕು.ಸ್ಮರಶ್ರೀ, ಕು.ನಂದಿತಾ, ಕು.ಗಾನವಿ, ಪ್ರೀತಂ, ಶಿವಮೂರ್ತಿ, ಪುಟ್ಟರಾಜು, ನಿತೀಶ್ ಪಾಲ್ಗೊಂಡು ಕೀರ್ತನೆಗಳನ್ನು ಹಾಡಿದರು. ಶಂಕರಮಠದ ವ್ಯವಸ್ಥಾಪಕ ಪ್ರಕಾಶಮೂರ್ತಿ ಸ್ವಾಗತಿಸಿದರು. ಎಲ್ಲೇಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.