ವಿದ್ಯಾರ್ಥಿಗಳಿಂದ ಶ್ರಮದಾನ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ತಂಡವು ತಾಲೂಕಿನ ಮರಳೇನಹಳ್ಳಿಯಲ್ಲಿ 7 ದಿನಗಳ ವಿಶೇಷ ಯುವಜನ ಸೇವಾ ಶಿಬಿರ ಹಮ್ಮಿಕೊಂಡಿದ್ದು, ಶುಕ್ರವಾರ ನೈರ್ಮಲ್ಯ, ಆರೋಗ್ಯ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಸಿದರು.
ಈಗಾಗಲೇ ಹಲವು ವಿಚಾರಗಳ ಕುರಿತ ಮೌಲಿಕ ಉಪನ್ಯಾಸಗಳು ನಡೆದಿದ್ದು, ಗಾಂಧಿ ಮತ್ತು ಹಿಂದ್ ಸ್ವರಾಜ್ ಪರಿಕಲ್ಪನೆಯ ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ನಾರಾಯಣನ್, ಶಿಕ್ಷಕರು ಮತ್ತು ಯುವಬರಹಗಾರರ ಹೊಣೆಗಾರಿಕೆ ಕುರಿತು ಎಂ.ವಿ.ಮಧುಕುಮಾರ್, ಯುವಜನತೆಯ ಮುಂದಿರುವ ಸವಾಲುಗಳು ಕುರಿತು ಜನಾರ್ದನ ಕೆಸರಗದ್ದೆ, ಸಕಾಲ ಸೇವೆಗಳ ಕುರಿತು ಉಪನ್ಯಾಸಕ ಬಿ.ಕೆ.ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧಿ ಕುರಿತು ಪ್ರಾಧ್ಯಾಪಕ ರಂಗಸ್ವಾಮಿ ಬೆಳಕವಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯ ಪಾತ್ರ ಕುರಿತು ಮೇಜರ್ ಎಸ್.ಮಹಾಬಲೇಶ್ವರ್, ಭಾಷೆ ಮತ್ತು ಸತ್ಯದ ಕುರಿತು ಕೆ.ವೆಂಕಟೇಶ್ ಮಾತನಾಡಿದ್ದಾರೆ. ಪ್ರತಿ ಸಂಜೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಗ್ರಾಮಸ್ಥರ ಮೆಚ್ಚುಗೆ ಗಳಿಸಿವೆ.
ಶಿಬಿರಾಧಿಕಾರಿ ಪ್ರೊ. ಚಂದ್ರಪ್ಪ ಮತ್ತು ಸಹಾಯಕ ಶಿಬಿರಾಧಿಕಾರಿ ಡಾ.ಬಿ.ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಶಿಬಿರ ಆಯೋಜನೆಗೊಂಡಿದೆ.
ಇಂದು ಉಪನ್ಯಾಸ: ಶಿಬಿರದಲ್ಲಿ ಶನಿವಾರ ಸಂಜೆ 4 ಗಂಟೆಗೆ ಗಾಂಧಿಯನ್ನು ನಾವೇಕೆ ಓದಬೇಕು ಎಂಬುದರ ಬಗ್ಗೆ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅವರಿಂದ ಮತ್ತು ಗಾಂಧಿ ಮತ್ತು ದೇಸಿ ಪ್ರಜ್ಞೆ ಕುರಿತು ಬೆಂ.ಗ್ರಾ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿಸಿರಾ ಅವರಿಂದ ಉಪನ್ಯಾಸವಿದೆ. ಪ್ರೊ. ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸಲಿದ್ದು, ತಾ.ಕಸಾಪ ನಿ.ಪೂ.ಅಧ್ಯಕ್ಷ ರವಿಕಿರಣ್, ಚಿಕ್ಕಣ್ಣ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

