ಬೆಂಗಳೂರು ಗ್ರಾಮಾಂತರ

ನಾಳೆ ಜಾನಪದ ಲೋಕೋತ್ಸವ-2014

Published On :

ರಾಮನಗರ: ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಜಾನಪದ ಲೋಕೋತ್ಸವ-2014 ಕಾರ್ಯಕ್ರಮ ಫೆ.15 ಮತ್ತು 16ರಂದು ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.
ಫೆ.15ರಂದು ಬೆಳಗ್ಗೆ 10.30ಕ್ಕೆ ಲೋಕೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಕರಕುಶಲ ಮಳಿಗೆಗಳನ್ನು ಖ್ಯಾತ ಕವಿ ಸಿದ್ದಲಿಂಗಯ್ಯ ಉದ್ಘಾಟಿಸುವರು. ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅಧ್ಯಕ್ಷತೆ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶನಿವಾರ ಸಂಜೆ 5.30ಕ್ಕೆ ಬಯಲು ರಂಗಮಂದಿರದಲ್ಲಿ ಪಟಾ ಕುಣಿತ, ಕಂಗೀಲು ಕುಣಿತ, ತಮಟೆ ಮೇಳ, ಉತ್ತರ ಭಾರತದ ಜಾನಪದ ಕಲೆಗಳು, ಕೊಂಬು ಕಹಳೆ, ಶಹನಾಯ್ವಾದನ, ಜೋಗತಿ ಮೇಳ, ಪೂಜಾ ಕುಣಿತ, ಡೊಳ್ಳು ಕುಣಿತ, ಹಾಡು ಮೇಳ, ಜನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಮ್ಮೇಗೌಡ ವಿವರಿಸಿದರು.
ಪ್ರಶಸ್ತಿ ಪುರಸ್ಕೃತರು: 2014ನೇ ಸಾಲಿನ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿಗೆ ಹಾಸನ ಜಿಲ್ಲೆಯ ನಂದಿಧ್ವಜ ಕಲಾವಿದ ಎಚ್.ಡಿ.ಸಂಜೀವಯ್ಯ, ನಾಡೋಜ ಜಿ.ನಾರಾಯಣ ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಜಾನಪದ ವಿದ್ವಾಂಸ ಎನ್.ಆರ್.ನಾಯಕ್, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಯನ್ನು ಕೌದಿ ಕಲಾವಿದೆ ಸುಗಲಾಬಾಯಿ ಗೌಡತಿ, ಸಿ.ಪಾಟಿಲ ಅವರಿಗೆ ಘೋಷಿಸಲಾಗಿದೆ ಎಂದು ತಿಮ್ಮೇಗೌಡ ವಿವರಿಸಿದರು.  ಸೋಬಾನೆ ಚಿಕ್ಕಮ್ಮ ಪ್ರಶಸ್ತಿಯನ್ನು ಬಡಗಚ್ಚಿ ದೊಡ್ಡನಿಂಗಮ್ಮ, ದೊಡ್ಡಮನೆ ಪ್ರಶಸ್ತಿಯನ್ನು ರೇವಮ್ಮ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಯನ್ನು ಈಶ್ವರಚಂದ್ರ ಬೆಟಗೇರಿ ಅವರಿಗೆ ನೀಡಲಾಗಿದೆ. ಜಾನಪದ ಲೋಕ ಪ್ರಶಸ್ತಿಯನ್ನು ಕೆಂಪಮ್ಮ, ಗೋಂದಳಿ ರಾಮಣ್ಣ, ಬಿ.ರಾಮಣ್ಣ, ಚಂದಗಾಲು ಬೋರಪ್ಪ, ವಸಂತ ನಾರಾಯಣ ರನ್ನವರೆ, ನಾಗು ತಿಮ್ಮೇಗೌಡ, ಸಿದ್ದಪ್ಪ ಅಮ್ಮಣ್ಣ ತಳೇವಾಡ, ಗಂಗಯ್ಯ ಪರ್ವ, ಶಿವಣ್ಣ, ದಾವಲ್ ಸಾಹೇಬ ಅತ್ತಾರ, ಡಾ.ವಿಶ್ವನಾಥ್ ಕರ್ನಾಡ, ಕೆ.ಎಲ್. ರಂಗಪ್ಪಗೌಡ, ಗಂಗಾಧರಸ್ವಾಮಿ, ಮಹಾದೇವು ಪಡೆದಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.