ಪೌರಾಣಿಕ ನಾಟಕದ ಉದ್ಘಾಟನೆ
ಕನಕಪುರ: ಹವ್ಯಾಸೀ ರಂಗಭೂಮಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರೀತಿ ಒತ್ತಾಸೆಗಳಿಂದ ಜೀವಂತವಾಗಿ ಉಳಿದಿದೆ, ಸಂಘಸಂಸ್ಥೆಗಳು ಪ್ರೊತ್ಸಾಹ ನೀಡದಿದ್ದರೆ ರಂಗಕಲೆ ಅಳಿವಿನತ್ತ ನಡೆಯುವುದು ನಿಶ್ಚಿತ ಎಂದು ಡಾ.ಟಿ.ಎನ್. ವಿಜಯ ಕುಮಾರ್ ಹೇಳಿದ್ದಾರೆ.
ಅವರು ಕನಕಪುರದ ನಾಡೋಜ ಡಾ.ರಾಜ್‌ಬಯಲು ರಂಗಮಂದಿರದಲ್ಲಿ ರಂಗಬಾಂಧವ್ಯ ಸಂಸ್ಥೆಯು ದಿ.ಕೆ.ಎಂ. ರಾಮಕೃಷ್ಣಪ್ಪ ಸಂಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀಕೃಷ್ಣ ರಾಯಭಾರ ಪೌರಾಣಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಮುಖ್ಯಅತಿಥಿಗಳಾಗಿ ಉದಯಕಲಾನಿಕೇತನದ ಸಂಚಾಲಕಿ ರೇಣುಕಾಬಾಲಿ ಉದಯಕುಮಾರ್, ಸುಶೀಲಮ್ಮ, ರಂಗಬಾಂಧವ್ಯದ ಮಹಾಪೋಷಕ ಕೆ.ಆರ್. ಕಾಂತರಾಜು, ಚಿಕ್ಕಮರಿಗೌಡ ಆಗಮಿಸಿದ್ದರು. ಅಂಗವಾಗಿ ವಾಹಿನಿ ಕಲಾವಿದೆ ಅಭಿನೇತ್ರಿ ಜಯಶ್ರೀ, ಹಿರಿಯ ರಂಗಕಲಾವಿದ, ಪ್ರಸಾಧನ ತಜ್ಞ ಆಲೆಮನೆ ಸುಂದರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ರಂಗಕಲಾ ನಿರ್ದೇಶಕ ಜಗದೀಶ್ವರಾಚಾರ್ಯ ಸ್ವಾಗತಿಸಿದರು. ದೇವರಾಜೇಅರಸ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಮುರಡಿ ಗಿರೀಶ್‌ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

